31.9 C
ಪುತ್ತೂರು, ಬೆಳ್ತಂಗಡಿ
April 29, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತೆಕ್ಕಾರು ಗ್ರಾಮ ಪಂಚಾಯತ್ ದ್ವಿತೀಯ ಹಂತದ ಗ್ರಾಮ ಸಭೆ

ತೆಕ್ಕಾರು: ತೆಕ್ಕಾರು ಗ್ರಾಮ ಪಂಚಾಯತ್‌ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಮಾ.11ರಂದು ಗ್ರಾ.ಪಂ. ಅಧ್ಯಕ್ಷೆ ಎನ್.ರಹಿಯಾನತ್ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಪಶುಪಾಲನಾ ಮತ್ತು ಪಶುಸಂಗೋಪನಾ ಇಲಾಖೆ ವೈದ್ಯಾಧಿಕಾರಿ ವಿಶ್ವನಾಥ್ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ಮುನ್ನಡೆಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಪುಷ್ಪಾ, ಸದಸ್ಯರಾದ ಅನ್ವರ್ ಎನ್, ಅಬ್ದುಲ್ ರಜಾಕ್, ಶೇಖರ ಪೂಜಾರಿ, ಯಮುನಾ, ನೆಬಿಸಾ, ಕೆ.ಎಮ್. ಹಕೀಮ್ ಮತ್ತು ಅಸಿಮಾ , ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಪಶು ಮತ್ತು ಕೃಷಿ ಸಖಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪಿಡಿಓ ಸುಮಯ್ಯ ಸ್ವಾಗತಿಸಿ, ಅನುಪಾಲನಾ ವರದಿ ವಾಚಿಸಿದರು. ಸಿಬ್ಬಂದಿ ಶಾಪಿ ವಾರ್ಡ್ ಸಭೆಗಳ ಬೇಡಿಕೆ ವಾಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗುಲಾಬಿ, ಗ್ರಾಮ ಆಡಳಿತ ಅಧಿಕಾರಿ ಸಾಕಮ್ಮ, ಪಿಆರ್ ಡಿ ಇಂಜಿನಿಯರ್ ಗಫೂರ್ ಸಾಬ್, ಶಿಕ್ಷಣ ಇಲಾಖೆ ಸಿಆರ್ ಪಿ ಶರೀಫ್ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

Related posts

SKSSF ಮದ್ದಡ್ಕ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಭಾರತೀಯ ಜನತಾ ಪಾರ್ಟಿಯ ಗರ್ಡಾಡಿ ಶಕ್ತಿ ಕೇಂದ್ರದ ನೂತನ‌ ಬೂತ್ ಸಮಿತಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಆಯ್ಕೆ

Suddi Udaya

ಸಾವ್ಯ ಬಿಜೆಪಿ ಯುವಮೊರ್ಚಾ ಅಧ್ಯಕ್ಷರಾಗಿ ಸ್ವಸ್ತಿಕ್ ಪೂಜಾರಿ, ಕಾರ್ಯದರ್ಶಿಯಾಗಿ ಪ್ರಶಾಂತ್ ಪೂಜಾರಿ ಆಯ್ಕೆ

Suddi Udaya

ಕಡಿರುದ್ಯಾವರ: ಕೊಪ್ಪದ ಗಂಡಿಯಲ್ಲಿ ಧರೆ ಕುಸಿತ : ಅಪಾರ ನಷ್ಟ

Suddi Udaya

ಪಡ್ಡಂದಡ್ಕದಲ್ಲಿ ಶ್ರೀ ಮಂಜುನಾಥೇಶ್ವರ ಕುಣಿತ ಭಜನಾ ಮಂಡಳಿಗೆ ಚಾಲನೆ

Suddi Udaya

ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದಲ್ಲಿ ಜಾತ್ರೋತ್ಸವದ ಅಂಗವಾಗಿ ದೇವರ ದಶ೯ನ ಬಲಿ ಉತ್ಸವ

Suddi Udaya
error: Content is protected !!