April 29, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮರೋಡಿ: ಗಾಳಿ ಮಳೆಗೆ ಮನೆ ಮೇಲೆ ಬಿದ್ದ ಬೃಹತ್‌ ಗಾತ್ರದ ಮರ, ಪ್ರಾಣಪಾಯದಿಂದ ಪಾರಾದ ಮನೆಯವರು: ಮನೆ ಸಂಪೂರ್ಣ ಹಾನಿ, ಲಕ್ಷಾಂತರ ರೂ. ನಷ್ಟ

ಮರೋಡಿ: ನಿನ್ನೆ ಸುರಿದ ಸಿಡಿಲು ಸಹಿತ ಭಾರಿ ಗಾಳಿ ಮಳೆಗೆ ಬೃಹತ್‌ ಗಾತ್ರದ ಮರವೊಂದು ಮನೆ ಮೇಲೆ ಬಿದ್ದು ಮನೆಗೆ ಸಂಪೂರ್ಣ ಹಾನಿಯಾದ ಘಟನೆ ಮರೋಡಿಯಲ್ಲಿ ನಡೆದಿದೆ.

ನಿನ್ನೆ ಸಂಜೆ ಸಮಯಕ್ಕೆ ತಾಲೂಕಿನಾದ್ಯಂತ ಗಾಳಿ ಮಳೆಯಾಗಿದೆ. ಮರೋಡಿಯಲ್ಲಿಯೂ ಮಳೆಯ ಪ್ರಮಾಣ ಜೋರಾಗಿತ್ತು. ಸಂಜೆ 6.30ಕ್ಕೆ ಸುರಿದ ಜೋರಾದ ಮಳೆಗೆ ಬೃಹತ್‌ ಗಾತ್ರದ ಮರ ಬುಡ ಸಮೇತ ಸಂತೋಷ್ ದೇವಾಡಿಗರವರ ಮನೆಯ ಮೇಲೆ ಉರುಳಿ ಬಿದ್ದಿದೆ. ಮನೆಯಲ್ಲಿ ಸಂತೋಷ ದೇವಾಡಿಗ ಅವರ ತಾಯಿ ಲಲಿತಾ, ತಮ್ಮ ಸಂದೀಪ್ ದೇವಾಡಿಗ, ತಮ್ಮನ ಪತ್ನಿ ರಜನಿ, ಸಣ್ಣ ಪ್ರಾಯದ ಮಗು ಮನೆಯೊಳಗೆ ಇದ್ದರು. ಜೋರಾದ ಶಬ್ದ ಬಂದಾಗ ಎಲ್ಲರೂ ಮನೆಯ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆಯ ಹಂಚು, ಶೀಟ್, ಅಡುಗೆ ಪಾತ್ರೆ, ಟಿವಿ, ಕಿಟಕಿ, ದಾರಂದ, ವಿದ್ಯುತ್ ಉಪಕರಣಗಳು ಎಲ್ಲವೂ ಹಾನಿಗೊಳಗಾಗಿದೆ.ಲಕ್ಷಾಂತರ ರೂ ನಷ್ಟ ಸಂಭವಿಸಬಹುದೆಂದು ತಿಳಿದು ಬಂದಿದೆ.

ಮಾಹಿತಿ ತಿಳಿದ ತಕ್ಷಣ ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತ್ನಾಕರ ಬುಣ್ಣನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್,ಕಂದಾಯ ಇಲಾಖಾ ಅಧಿಕಾರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ಸ್ಥಳೀಯರಾದ ಸೂರಾಜ್ ಅವರು ಸುದ್ದಿ ಉದಯಕ್ಕೆ ಮಾಹಿತಿ ನೀಡಿದ್ದಾರೆ.

Related posts

ಶ್ರೀ ರಾಮ ಮಂದಿರದ ಹನುಮ ರಥಕ್ಕೆ ಸ್ವಾಗತ

Suddi Udaya

ಬೆಳ್ತಂಗಡಿ: ಸಂತ ಅಲ್ಫೋನ್ಸ ಮಿಷನ್ ಲೀಗ್ ವತಿಯಿಂದ ರೂ. 75 ಸಾವಿರ ಚೆಕ್ ಹಸ್ತಾಂತರ

Suddi Udaya

ಸಂಸದ ಬ್ರಿಜೇಶ್ ಚೌಟ, ವಿ.ಪ. ಶಾಸಕ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕ ಸಂಜೀವ ಮಠಂದೂರು ರವರಿಗೆ ವಾಣಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಮತ್ತು ಸಭಾಭವನ ಉದ್ಘಾಟನೆಯ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ

Suddi Udaya

ಬೆಳ್ತಂಗಡಿ ಫೆಡರೇಷನ್ ಆಫ್ ಕರ್ನಾಟಕ ಆಟೋ ಡ್ರೈವರ್ಸ್ ಯೂನಿಯನ್ ವತಿಯಿಂದ ಬಿ.ಜಿ ಆಟೋ ಡ್ರೈವರ್ಸ್ ಯೂನಿಯನ್ ಮಹಾಸಭೆ,

Suddi Udaya

ಸುಲ್ಕೇರಿಮೊಗ್ರು: ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿಯ ವತಿಯಿಂದ ವಿ. ಹರೀಶ್ ನೆರಿಯರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಶ್ರೀ ಧ.ಮಂ. ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಬಾಷ್ (BOSCH) ಆಟೋಮೋಟಿವ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯಿಂದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಔದ್ಯೋಗಿಕ ನೇರ ಸಂದರ್ಶನ

Suddi Udaya
error: Content is protected !!