September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲಾ ವಾರ್ಷಿಕೋತ್ಸವ “ಮನೋಲ್ಲಾಸ ಸಾಂಸ್ಕೃತಿಕ ಸಂಭ್ರಮ -2025”

ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಹೊಸಂಗಡಿ ಬೆಳ್ತಂಗಡಿ ತಾಲೂಕು ಇಲ್ಲಿ ಶಾಲಾ ವಾರ್ಷಿಕೋತ್ಸವ “ಮನೋಲ್ಲಾಸ ಸಾಂಸ್ಕೃತಿಕ ಸಂಭ್ರಮ – 2025” ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು .

ಮಾಜಿ ಪಂಚಾಯತ್ ಅಧ್ಯಕ್ಷರು, ಹಾಗೂ ಹಾಲಿ ಪಂಚಾಯತ್ ಸದಸ್ಯ ಹರಿಪ್ರಸಾದ್ ಹಾಗೂ ಪ್ರಗತಿಪರ ಕೃಷಿಕರು ಹಾಗೂ ಶಾಲೆಯ ಹಿತೈಷಿಗಳಾದ ಸೀತಾರಾಮ ರೈ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶಾಲಾ ಪೋಷಕ ಸಮಿತಿಯ ಅಧ್ಯಕ್ಷ ಮಾಧವ ಗೌಡ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಶಾಲೆಯ ಕಾರ್ಯ ಕಲಾಪಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಶಾಲಾ ಪ್ರಾಂಶುಪಾಲರಾದ ಶ್ರೀಧರ್ ಶೆಟ್ಟಿ ಶಾಲೆಯ ವಾರ್ಷಿಕ ವರದಿಯನ್ನು ವಾಚಿಸಿದರು. ಹೊಸಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಇವರು ಶಾಲೆಯ ಚೊಚ್ಚಲ ಶಾಲಾ ಸಂಚಿಕೆ ‘ನಮಸ್ತೆ ‘ ಹಸ್ತಪ್ರತಿಯನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ 2023-24 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಅನ್ವಿತಾ ಮತ್ತು ಶ್ರೀಕಾಂತ್ ಹಾಗೂ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ 8ನೇ ತರಗತಿಯ ಮೋಕ್ಷಿತ್ ಮತ್ತು 9ನೇ ತರಗತಿಯ ಮೋನಿಷಾ, ರಾಜ್ಯ ಮಟ್ಟದ ಕಬಡ್ಡಿ ತರಬೇತುದಾರ ಜಯಂತ್ ಶೆಟ್ಟಿ ಮತ್ತು ಕರಾಟೆ ತರಬೇತುದಾರರಾದ ಕಿಶೋರ್ ಹಾಗೂ ಪ್ರತೀಶ್ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು.

ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಖಜಾಂಚಿ ರಾಜೇಶ್ ನೆಲ್ಯಾಡಿ, ಸಮಾಜ ಸೇವಕ ಆಲಿ ಅಬ್ಬ,. ಶಾಲೆಯ ಪೋಷಕ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ಹೇಮಲತಾ, ಹೊಸಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಮತ್ತು ಶ್ರೀಮತಿ ನಾಗರತ್ನ, ಹಾಗೂ ಮುರಳೀಧರ್, ಪ್ರಾಂಶುಪಾಲರು ಮೊರಾರ್ಜಿ ವಸತಿ ಶಾಲೆ ಮುಂಡಾಜೆ, ಸಂತೋಷ್, ಪ್ರಾಂಶುಪಾಲರು ನಾರಾಯಣ ಗುರು ವಸತಿ ಶಾಲೆ ಪುಂಜಾಲಕಟ್ಟೆ, ಸಂಗನಬಸಯ್ಯ ಹಿರೇಮಠ, ಪ್ರಾಂಶುಪಾಲರು ಮೊರಾರ್ಜಿ ವಸತಿ ಶಾಲೆ ಕಲ್ಲಬೆಟ್ಟು. ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಶಾಲಾ ಶಿಕ್ಷಕಿ ಶ್ರೀಮತಿ ವಿದ್ಯಲತಾ, ಶಿಕ್ಷಕಿ ಕಾವ್ಯ, ಶಿಕ್ಷಕಿ ರಕ್ಷಿತಾ ಇವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಮತ್ತು ಶಿಕ್ಷಕಿ ಶ್ರೀಮತಿ ಅಶ್ವಿನಿ ಇವರು ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಾಲೆಯ ಚಿತ್ರಕಲಾ ಶಿಕ್ಷಕ ಸುಧೀರ್ ಬಾಳೆಪುಣಿ ಮತ್ತು ಶಿಕ್ಷಕಿ ಅನಿತಾ ಇವರು ವಂದನಾರ್ಪಣೆಯನ್ನು ನೆರವೇರಿಸಿದರು.

Related posts

ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಜಿನ ಮoದಿರಕ್ಕೆ ಲಾವಣ್ಯ ಬಲ್ಲಾಳ್ ಭೇಟಿ

Suddi Udaya

ಮರೋಡಿ: ಮಾವಿನಕಟ್ಟೆಯಲ್ಲಿ ಭಾರೀ ಮಳೆಗೆ ಭೂಕುಸಿತ

Suddi Udaya

ಕಸ್ತೂರಿ ರಂಗನ್ ವರದಿ ವಿರೋಧಿಸಿ ಶಿಬಾಜೆ ಗ್ರಾ.ಪಂ ನಲ್ಲಿ ಪ್ರತಿಭಟನೆ : ಸರಕಾರಕ್ಕೆ ಮನವಿ

Suddi Udaya

ಎಕ್ಸೆಲ್ ನ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರಿಗೆ ಗೌರವಾರ್ಪಣೆ

Suddi Udaya

ಲಾಯಿಲ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂಘ ಉದ್ಘಾಟನೆ

Suddi Udaya

ಇಂದಬೆಟ್ಟು: ಕರುವಲ್ಲ ಕಲ್ಲಗುಂಡ ದೇವಸ್ಥಾನ ಹಾಗೂ ಬಂಗಾಡಿ ಹಾಡಿ ದೈವಗಳ ಕಾಣಿಕೆ ಡಬ್ಬಿ ಕಳ್ಳತನ

Suddi Udaya
error: Content is protected !!