ಕಣಿಯೂರು: ದೀಪಾ ಸಂಜೀವಿನಿ ಗ್ರಾಮ ಪಂಚಾಯಿತ್ ಮಹಿಳಾ ಕಣಿಯೂರು ಇದರ ವಾರ್ಷಿಕ ಮಹಾಸಭೆ ಮಾ.11 ರಂದು ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಗೀತಾ ವಹಿಸಿದ್ದರು. ಪಂಚಾಯತ್ ಅಧ್ಯಕ್ಷ ಸೀತಾರಾಮ ಮಡಿವಾಳರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಜೀವಿನಿ ಸಂಘದ ಸದಸ್ಯೆ ಶೀಲರವರು ಪ್ರಾರ್ಥನೆಯನ್ನು ಮಾಡಿದರು.ಎಂ. ಬಿಕೆ ರತ್ನಾವತಿ ಒಕ್ಕೂಟದ ವಾರ್ಷಿಕ ವರದಿ ಹಾಗೂ ಒಕ್ಕೂಟದ ಜಮಾ & ಖರ್ಚು ಮಂಡಿಸಿ ಅನುಮೋದಯನ್ನು ಪಡೆದರು.

ವಲಯ ಮೇಲ್ವಿಚಾರಕರಾದ ವೀಣಾಶ್ರಿ ಸಂಜೀವಿನಿ ಯೋಜನೆಯ ಧ್ಯೇಯೋದ್ಧೇಶಗಳ ಬಗ್ಗೆ ಜೀವನೋಪಾಯ ಚಟುವಟಿಕೆ, ವಾರ್ಡ್ ಒಕ್ಕೂಟದ ರಚನೆ ಬಗ್ಗೆ ಹಾಗೂ ಒಕ್ಕೂಟದಿಂದ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ಇತರ ಹಲವಾರು ವಿಷಯಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಮಾಹಿತಿಯನ್ನು ಸದಸ್ಯರಿಗೆ ನೀಡಿದರು. ಉಷಾ ಕಾಮತ್ ಸರ್ಕಾರ ನೀಡುವ ವಿಮಾ ಸೌಲಭ್ಯಗಳ ಬಗ್ಗೆ ಇತರ ಬ್ಯಾಂಕಿನ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದರು. ಸಂಘದ ಸದಸ್ಯರಿಗೆ ಕೆಲವೊಂದು ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಅತೀ ಹೆಚ್ಚು ಸಾಲ ಪಡೆದ ಸಂಘವನ್ನು ಗುರುತಿಸಿ ಸ್ಮರಣಿಕೆ ನೀಡಲಾಯಿತು. ಒಕ್ಕೂಟಕ್ಕೆ ನೂತನವಾಗಿ ಆಯ್ಕೆಗೊಂಡ ಸದಸ್ಯರುಗಳನ್ನು ಪರಿಚಯದೊಂದಿಗೆ, ನಿರ್ಗಮಿತ ಸದಸ್ಯರುಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು ಜೊತೆಗೆ ನೂತನ ಸಮಿತಿಗೆ ಪುಷ್ಟ ಗುಚ್ಛದೊಂದಿಗೆ ದಾಖಲಾತಿಗಳನ್ನು ಸಲ್ಲಿಸುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಲಾಯಿತು ಪಂಚಾಯತ್ ಅಧ್ಯಕ್ಷರು ಸ್ವಚ್ಛ ತೆಯ ಬಗ್ಗೆ ಒಕ್ಕೂಟದ ಬಗ್ಗೆ ಮೆಚ್ಚುಗೆ ತಿಳಿಸಿದರು. ನಿರ್ಗಮಿತ ಅಧ್ಯಕ್ಷರು ಅನಿಸಿಕೆಯನ್ನು ಹಂಚಿಕೊಂಡರು ಸಂಘದ ಸದಸ್ಯರು ತಯಾರಿಸಿದ ಪಿನಾಯಿಲನ್ನು ಬಿಡುಗಡೆ ಮಾಡಲಾಯಿತು. ಕೃಷಿ ಸಖಿ ಕಾರ್ಯಕ್ರಮ ನಿರೂಪಣೆ ಮಾಡಿದರು.ಎಲ್.ಸಿ ಆರ್ ಪಿ ಸ್ವಾಗತಿಸಿದರು. ಸ್ವಚ್ಛ ವಾಹನದ ಡ್ರೈವರ್ ಶ್ವೇತ ರವರು ಧನ್ಯವಾದವಿತ್ತರು.