ಮಡಂತ್ಯಾರು : ಕಲೆಯೇ ಯೂರಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಬೆಳಿಗ್ಗೆ ಷಡಾಧಾರ ಪ್ರತಿಷ್ಠೆ, ಹಾಗೂ ರಾತ್ರಿ ಗರ್ಭನ್ಯಾಸ ಕಾರ್ಯಕ್ರಮವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪದ್ಮನಾಭ ತಂತ್ರಿ ಅರವತ್ತ್ ಅವರ ನೇತೃತ್ವದಲ್ಲಿ ವೈದಿಕ,ವಿಧಿ-ವಿಧಾನಗಳೊಂದಿಗೆ ನೆರವೇರಿಸಿದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಆಡಳಿತ ಕುಲಸಚಿವ ಮತ್ತು ಸಂಸ್ಕೃತ ವಿಭಾಗದ ಡಾ.ಶ್ರೀಧರ ಭಟ್ ಧಾರ್ಮಿಕ ಚಿಂತನೆ ಬಗ್ಗೆ ಉಪನ್ಯಾಸ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷತಿಮ್ಮಯ್ಯ ಗೌಡ, ಕೋಂಗುಜೆ ಅಧ್ಯಕ್ಷತೆ ವಹಿಸಿದ್ದರು.ಕೊಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಯಾಮಣಿ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿದುಗ್ಗೇ ಗೌಡ ಅಂತರ, ಪ್ರಧಾನ ಸಂಚಾಲಕರಾದ ಪ್ರಚಂಡಭಾನು ಭಟ್ ಪಾಂಬೇಲು, ಅನುವಂಶಿಕ ಆಡಳಿತ ಮೊಕ್ತೇಸರರಾದ ಕುಕ್ಕಪ್ಪ ಗೌಡ ಡೆಂಬುಗ, ಯಾದವ ಗೌಡ ತೋಟ, ಪ್ರಧಾನ ಅರ್ಚಕರಾದ ಪ್ರಶಾಂತ ಹೊಳ್ಳ ಉಪಸ್ಥಿತರಿದ್ದರು.
ಉಜಿರೆ ಎಸ್.ಡಿ.ಎಂ.ಕಾಲೇಜು ಉಪನ್ಯಾಸಕರಾದ ಡಾ.ದಿವಾ ಕೊಕ್ಕಡ ನಿರೂಪಣೆ ಮಾಡಿದರು. ವಿವಿಧ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಭಕ್ತರು ಮತ್ತಿತರರಿದ್ದರು.