March 13, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಭಾರೀ ಗಾಳಿ ಮಳೆ: ಪಡಂಗಡಿ ವ್ಯಾಪ್ತಿಯಲ್ಲಿ ಮನೆ ಮೇಲೆ ಹಾಗೂ ರಸ್ತೆಗೆ ಬಿದ್ದ ಮರ : ಅಪಾರ ಹಾನಿ

ಪಡಂಗಡಿ: ನಿನ್ನೆ ಸುರಿದ ಭಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ಮನೆ ಮೇಲೆ ಹಾಗೂ ರಸ್ತೆಗೆ ಮರ ಬಿದ್ದು ಅಪಾರ ಹಾನಿಯಾದ ಘಟನೆ ಪಡಂಗಡಿ ವ್ಯಾಪ್ತಿಯಲ್ಲಿ ನಡೆದಿದೆ.

ನಿನ್ನೆ ಸಂಜೆ ಸಮಯಕ್ಕೆ ತಾಲೂಕಿನಾದ್ಯಂತ ಗಾಳಿ ಮಳೆಯಾಗಿದ್ದು, ಪಡಂಗಡಿ ವ್ಯಾಪ್ತಿಯಲ್ಲಿ ಬೀಸಿದ ಭಾರೀ ಗಾಳಿ ಮಳೆಗೆ ಎರಡು ಮನೆಗಳ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದ್ದು, ಅಪಾರ ನಷ್ಟ ಉಂಟಾಗಿದೆ. ಮನೆಯ ಹಂಚು, ಶೀಟ್, ಅಡುಗೆ ಪಾತ್ರ, ವಿದ್ಯುತ್ ಉಪಕರಣಗಳು ಎಲ್ಲವೂ ಹಾನಿಗೊಳಗಾಗಿದೆ. ಇದೇ ವೇಳೆ ರಸ್ತೆಯ ಮೇಲೆ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾದ ಘಟನೆ ನಡೆದಿದೆ.

ಸ್ಥಳಕ್ಕೆ ಪಡಂಗಡಿ ಗ್ರಾ.ಪಂ. ಸದಸ್ಯರಾದ ಸಂತೋಷ್ ಕುಮಾರ್ ಜೈನ್, ಹಾಗೂ ಇತರರು ಭೇಟಿ ನೀಡಿ ಪರಿಶೀಲಿಸಿದರು.

Related posts

ಉಜಿರೆ ಸಂತ ಅಂತೋನಿ ಚರ್ಚ್ ಇದರ ಮುಂದಾಳತ್ವದಲ್ಲಿ ಹೊಸ ಮನೆಯ ಆಶೀರ್ವಚನ ಮತ್ತು ಹಸ್ತಾಂತರ ಕಾರ್ಯಕ್ರಮ

Suddi Udaya

ಸುಲ್ಕೇರಿ ಕುಲಾಲ ಕುಂಭಶ್ರೀ ಸಂಘದ ವತಿಯಿಂದ ಕುಲಾಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಎಸ್.ಎಸ್.ಎಲ್.ಸಿ ಸಾಧಕಿ ಪೂರ್ವಿಕ ರಿಗೆ ಸನ್ಮಾನ

Suddi Udaya

ಕೊಕ್ಕಡ ರಸ್ತೆಯ ಇಕ್ಕೆಲಗಳಲ್ಲಿ ಅಪಾಯಕಾರಿಯಾದ ಮರಗಿಡಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರಿಂದ ಅರಸಿನಮಕ್ಕಿ ಪಂ.ಅ. ಅಧಿಕಾರಿಯವರಿಗೆ ಮನವಿ

Suddi Udaya

ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್. ಪ್ರಭಾಕರ, ಉಪಾಧ್ಯಕ್ಷರಾಗಿ ಪ್ರತಾಪ್ ಶೆಟ್ಟಿ ಆಯ್ಕೆ

Suddi Udaya

ಮಲವಂತಿಗೆ: ಉಮೇಶ್ ರವರಿಗೆ ಹಲ್ಲೆ, ಬೆದರಿಕೆ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಗುರುವಾಯನಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

Suddi Udaya
error: Content is protected !!