March 14, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐ.ಟಿ.ಐ.ಯಲ್ಲಿ ವಿಶ್ವ ಮಹಿಳಾ ದಿನಾಚರಣೆ

ಉಜಿರೆ : ಮಹಿಳೆಯರನ್ನು ಎಲ್ಲಿ ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. ತ್ಯಾಗ, ಕ್ಷಮಾದಾನ, ಪ್ರೀತಿ, ವಾತ್ಸಲ್ಯ ಗುಣವನ್ನು ಹೊಂದಿರುವ ಬೃಹತ್ತಾದ ಮೂರ್ತಿ ಮಹಿಳೆ ಎಂದು ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಚೈತ್ರ ಹೇಳಿದರು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐ.ಟಿ.ಐ.ಯಲ್ಲಿ ಇಂದು (ಮಾ.10) ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. “ನಮಗೆ ಕಾಣುವ ಮೊದಲ ಶ್ರೇಷ್ಠ ಮಹಿಳೆ ತಾಯಿ. ಅವಳು ನಮಗೆ ಮಾತೆಯಾಗಿ, ನಮ್ಮ ತಂದೆಗೆ ಸಹಧರ್ಮಿಣಿಯಾಗಿ, ಅವರ ಹೆತ್ತವರಿಗೆ ಮಗಳಾಗಿ, ಅಣ್ಣನಿಗೆ ತಂಗಿಯಾಗಿ, ತಮ್ಮನಿಗೆ ಅಕ್ಕನಾಗಿ ವಿವಿಧ ಜವಾಬ್ದಾರಿ ನಿರ್ವಹಿಸುತ್ತಾಳೆ. ಅಲ್ಲದೆ, ಭಾರತೀಯ ಮಹಿಳೆ ಎಲ್ಲಿ ಹೋರಾಟ ಮಾಡಬೇಕೋ ಅಲ್ಲಿ ಹೋರಾಡುವ ಗುಣ ಹೊಂದಿರುವವಳು. ಇಂತಹ ಮಹಿಳೆಯನ್ನು ಗುರುತಿಸಿ ಗೌರವಿಸುವ ದಿನ ಈ ಮಹಿಳಾ ದಿನ” ಎಂದರು.

“ಈ ಸಂಸ್ಥೆಯಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರೇ ಇರುವ ಈ ಸಂಸ್ಥೆಯಲ್ಲಿ ಮಹಿಳಾ ಸಬಲೀಕರಣಕ್ಕಾಗಿ ವಿಶೇಷ ಕಾರ್ಯಕ್ರಮ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವ ನಮ್ಮೆಲ್ಲರ ಆದರ್ಶ ಮಾತೆ ಡಾ. ಹೇಮಾವತಿ ವೀ. ಹೆಗ್ಗಡೆ ಅವರು ಈ ಸಂಸ್ಥೆಯ ವಿದ್ಯಾರ್ಥಿನಿಯರ ಬೆಳವಣಿಗೆಗಾಗಿ ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿದ್ದಾರೆ. ಅಲ್ಲದೆ ಸಿರಿ ಗ್ರಾಮೋದ್ಯೋಗ ಸಂಸ್ಥೆ ಹಾಗೂ ಎಸ್.ಕೆ.ಡಿ.ಆರ್.ಡಿ.ಪಿ. ಸಂಸ್ಥೆಯ ಮೂಲಕ ಸಮಾಜದ ಬಡ ಮಹಿಳೆಯರ ಆರ್ಥಿಕ ಸಬಲೀಕರಣದ ರೂವಾರಿಯಾಗಿ ಕೆಲಸ ಮಾಡುವ ಜವಾಬ್ದಾರಿಯುತ ಸ್ಥಾನದಲ್ಲಿ ಉತ್ತಮ ಭಾರತ ಕಟ್ಟುವ ಕೆಲಸವನ್ನು ಅವರು ಮಾಡುತ್ತಿದ್ದಾರೆ” ಎಂದು ಅವರು ಹೇಳಿದರು. ವಿದ್ಯಾರ್ಥಿನಿ ಅಶೂರಾ ಅವರು ಸಾರ್ಥಕ ಜೀವನ ನಡೆಸಿದ ಪ್ರಥಮ ಮಹಿಳೆಯರ ಪಟ್ಟಿಯನ್ನು ವಾಚಿಸಿದರು.

ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು. ಅಫೀಜಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಆಯಿಷತ್ ನಸೀಹಾ ವಂದಿಸಿದರು.

Related posts

ಇತಿಹಾಸ ಪ್ರಸಿದ್ಧ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕುಂಭಾಭಿಷೇಕ: ಸಾಯಿ ಕುಮಾರ್ ಶೆಟ್ಟಿ ನವಶಕ್ತಿ ಇವರಿಂದ ಕಾಯಾ೯ಲಯದ ಉದ್ಘಾಟನೆ

Suddi Udaya

ಶಾಲಾ ಮಕ್ಕಳ ರಕ್ಷಣೆಗೆ ಬೇಕಿದೆ ಮಚ್ಚಿನಕ್ಕೊಂದು ಬ್ಯಾರಿಕೇಡ್

Suddi Udaya

ಬೆಳ್ತಂಗಡಿ : ರೆಂಕೆದಗುತ್ತು ನಿವಾಸಿ ಉದಯ ಪೂಜಾರಿ ನಿಧನ

Suddi Udaya

ಶ್ರೀರಾಮ ನವಮಿ ಪ್ರಯುಕ್ತ ಮಠದ ಪಟ್ಟದ ದೇವರಿಗೆ ಪಂಚಾಮೃತ ಅಭಿಷೇಕ ರಾಮೋತ್ಸವ

Suddi Udaya

ಕಳೆಂಜ: ಭಾರಿ ಗಾಳಿ ಮಳೆಗೆ ಮರ ಬಿದ್ದು ಮನೆಗೆ ಹಾನಿ

Suddi Udaya

ಕಜಕೆ, ಎಳನೀರು , ಕಕ್ಕಿಂಜೆ ಶಾಲಾ ಮತಗಟ್ಟೆಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಗಿಲನ್ ಭೇಟಿ

Suddi Udaya
error: Content is protected !!