24.8 C
ಪುತ್ತೂರು, ಬೆಳ್ತಂಗಡಿ
April 30, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎ.12:ಸಂಪತ್ ಬಿ ಸುವರ್ಣ ನೇತೃತ್ವದಲ್ಲಿ ಅಳದಂಗಡಿಯಲ್ಲಿ ಹನುಮಯಾಗ ಹಾಗೂ ಹನುಮೋತ್ಸವ ಕಾರ್ಯಕ್ರಮ: ಭಾರತೀಯರ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ತುಳು ನಾಟಕ ಪ್ರದರ್ಶನ

ಅಳದಂಗಡಿ: ಸಂಸ್ಕಾರ ಭಾರತಿ ಬೆಳ್ತಂಗಡಿ ಹಾಗೂ ಹನುಮೋತ್ಸವ ಸಮಿತಿ ಇದರ ಜಂಟಿ ಆಶ್ರಯದಲ್ಲಿ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರ ಗೌರವಾಧ್ಯಕ್ಷತೆಯಲ್ಲಿ,ಯುವ ನಾಯಕ ಸಂಪತ್ ಬಿ ಸುವರ್ಣರವರ ಮುಂದಾಳತ್ವದಲ್ಲಿ ಎ.12 ರಂದು ಹನುಮ ಜಯಂತಿಯ ಅಂಗವಾಗಿ ನಡೆಯುವ ಹನುಮೋತ್ಸವ ಕಾರ್ಯಕ್ರಮದ ಆಚರಣೆಯ ಪೂರ್ವಭಾವಿ ಸಭೆಯು ಶ್ರೀ ಸತ್ಯದೇವತಾ ದೈವಸ್ಥಾನದ ವಠಾರದಲ್ಲಿ ಮಾ.10 ರಂದು ನಡೆಯಿತು.

ಸಂಸ್ಕಾರ ಭಾರತಿ ಬೆಳ್ತಂಗಡಿ ಘಟಕ ಇದರ ಅಧ್ಯಕ್ಷರಾದ ಸಂಪತ್ ಬಿ ಸುವರ್ಣ ಮಾತನಾಡಿ ಅಪಾರ ಭಕ್ತಿಯಿಂದ ಆಚರಿಸಲಾಗುವ ಹಿಂದೂ ಹಬ್ಬವಾದ ಹನುಮಾನ್ ಜಯಂತಿಯನ್ನು ಅತ್ಯಂತ ಶ್ರದ್ದಾ ಭಕ್ತಿಯಿಂದ ಪೂಜಿಸುವ ಸಲುವಾಗಿ ಎ.12 ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಈಗಾಗಲೇ ಕಾರ್ಯಕ್ರಮದ ಯಶಸ್ವಿಗೆ ರೂಪುರೇಷೆ ತಯಾರಿಸಲಾಗಿದೆ. ಅಳದಂಗಡಿ ವಲಯದ ಸುಮಾರು 22 ಗ್ರಾಮಗಳ ಭಕ್ತರು ಬ್ರಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಭಕ್ತಿ ಪ್ರಧಾನವಾದ ಈ ಕಾರ್ಯಕ್ರಮಕ್ಕೆ ಹಿಂದೂ ಭಾಂಧವರು ಸಹಕರಿಸಬೇಕು ಎಂದರು.ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ ಮಾತನಾಡಿ ಸತ್ಯದೇವತಾ ದೈವಸ್ಥಾನದ ಪರಿಸರದಲ್ಲಿ ನಡೆಯುವ ಹನುಮೋತ್ಸವಕ್ಕೆ ಸಂಪೂರ್ಣ ಬೆಂಬಲ ಹಾಗೂ ಸಹಕಾರವಿದೆ. ರಾಮನ ಮೇಲಿನ ಅಚಲ ಭಕ್ತಿಗೆ ಹೆಸರುವಾಸಿಯಾದ ಹನುಮಂತನನ್ನು ಪೂಜಿಸುವ ಕಾರ್ಯ ಹನುಮೋತ್ಸವ ಮೂಲಕ ನಡೆಯುತ್ತಿರುವುದು ಸಂತೋಷ ತಂದಿದೆ ಎಂದರು.

ವೇದಿಕೆಯಲ್ಲಿ ತಾ.ಪಂ ಮಾಜಿ ಸದಸ್ಯ ಪ್ರಭಾಕರ ಶೆಟ್ಟಿ ಉಪ್ಪಡ್ಕ, ವಿಜಯ ಗೌಡ ವೇಣೂರು,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸದಸ್ಯ ಶಶಿಧರ ಎ ಜೈನ್ ಉಪಸ್ಥಿತರಿದ್ದರು. ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಸ್ವಾಗತಿಸಿ, ವಂದಿಸಿದರು‌.ಪೂರ್ವಭಾವಿ ಸಭೆಯಲ್ಲಿ ನೂರಾರು ಹಿಂದೂ ಭಾಂಧವರು,ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿ, ಸೂಕ್ತ ರೀತಿಯಲ್ಲಿ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಹನುಮೋತ್ಸವ- 2025 ಸಮಿತಿ ರಚಿಸಲಾಯಿತು. ಸಮಿತಿ ಗೌರವ ಅಧ್ಯಕ್ಷರಾಗಿ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರನ್ನು ಆಯ್ಕೆ ಮಾಡಲಾಯಿತು.ಹಾಗೂ ಸಮಿತಿ ಸಂಚಾಲಕರನ್ನು,ಉಪ ಸಮಿತಿಗಳನ್ನು ರಚಿಸಲಾಯಿತು.

ಹನುಮೋತ್ಸವ ನಮ್ಮೆಲ್ಲರ ಭಕ್ತಿಯ ಸಂಕೇತ : ಸಂಪತ್ ಬಿ ಸುವರ್ಣಅಳದಂಗಡಿ ವಲಯದ 22 ಗ್ರಾಮಗಳ ಮನೆ ಮನೆಗೆ ತೆರಳಿ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸುವುದು, ವೃತಧಾರಿಗಳು ಮೂರು ದಿನಗಳ ವೃತಾಚರಣೆ ಕೈಗೊಳ್ಳುವುದು, ಎಳ್ಲುಗಂಟು ಮಂತ್ರಾಕ್ಷತೆ ವಿತರಣೆ, 25 ಭಜನಾ ತಂಡಗಳಿಂದ ಭಜನೋತ್ಸವ,ಹನುಮ ಸಹಸ್ರ ಕದಳಿ ಯಾಗ, ಸಾಮೂಹಿಕ ಹನುಮಾನ್ ಚಾಲಿಸ ಪಠಣ, ಹನುಮ ಶ್ರೀರಕ್ಷೆ ವಿತರಣೆ,ಹನುಮಯಾಗ ಪೂರ್ಣಾಹುತಿ,ಪ್ರಸಾದ ವಿತರಣೆ,ಲಂಕಾದಹನ, ಬೆಡಿ ಪ್ರದರ್ಶನ,ಧಾರ್ಮಿಕ ಸಭಾ ಕಾರ್ಯಕ್ರಮ,ಅನ್ನಪ್ರಸಾದ ವಿತರಣೆ ಬಳಿಕ ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ನಾಟಕ ಪ್ರದರ್ಶನ ಎಂದು ಸಮಿತಿ ಅಧ್ಯಕ್ಷ ಸಂಪತ್ ಬಿ ಸುವರ್ಣ ಹೇಳಿದರು.

Related posts

ಝೀ ಕನ್ನಡ ದ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋ ಗೆ ಗುರುವಾಯನಕೆರೆಯ ಪ್ರತಿಭೆ ತ್ರಿಷಾ ಆಯ್ಕೆ

Suddi Udaya

ಕಲ್ಮಂಜ: ಡಾ| ಉದಯ ಹೆಬ್ಬಾರ್ ನಿಧನ

Suddi Udaya

INICET ಪ್ರವೇಶ ಪರೀಕ್ಷೆ: ಉಜಿರೆಯ ಡಾ|ಶಿವಾನಿಗೆ ದೇಶದಲ್ಲೇ 191ನೇ ರ್ಯಾಂಕ್

Suddi Udaya

ಸಿಬಿಎಸ್ಸಿ ಎಸ್.ಎಸ್.ಎಲ್.ಸಿ ಫಲಿತಾಂಶ: ಶ್ರೀ ವಿದ್ಯಾಸಾಗರ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಕೊಯ್ಯೂರು: ಆದೂರ್ ಪೆರಾಲ್ ಉತ್ಸಾಹಿ ಸ್ವಯಂ ಸೇವಕ ತಂಡದಿಂದ ಶ್ರಮದಾನ

Suddi Udaya

ಇಳಂತಿಲ: ಪ್ರಥಮ ಹಂತದ ಗ್ರಾಮ ಸಭೆ

Suddi Udaya
error: Content is protected !!