
ಪಡಂಗಡಿ: ನಿನ್ನೆ ಸುರಿದ ಭಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ಮನೆ ಮೇಲೆ ಹಾಗೂ ರಸ್ತೆಗೆ ಮರ ಬಿದ್ದು ಅಪಾರ ಹಾನಿಯಾದ ಘಟನೆ ಪಡಂಗಡಿ ವ್ಯಾಪ್ತಿಯಲ್ಲಿ ನಡೆದಿದೆ.

ನಿನ್ನೆ ಸಂಜೆ ಸಮಯಕ್ಕೆ ತಾಲೂಕಿನಾದ್ಯಂತ ಗಾಳಿ ಮಳೆಯಾಗಿದ್ದು, ಪಡಂಗಡಿ ವ್ಯಾಪ್ತಿಯಲ್ಲಿ ಬೀಸಿದ ಭಾರೀ ಗಾಳಿ ಮಳೆಗೆ ಎರಡು ಮನೆಗಳ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದ್ದು, ಅಪಾರ ನಷ್ಟ ಉಂಟಾಗಿದೆ. ಮನೆಯ ಹಂಚು, ಶೀಟ್, ಅಡುಗೆ ಪಾತ್ರ, ವಿದ್ಯುತ್ ಉಪಕರಣಗಳು ಎಲ್ಲವೂ ಹಾನಿಗೊಳಗಾಗಿದೆ. ಇದೇ ವೇಳೆ ರಸ್ತೆಯ ಮೇಲೆ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾದ ಘಟನೆ ನಡೆದಿದೆ.


ಸ್ಥಳಕ್ಕೆ ಪಡಂಗಡಿ ಗ್ರಾ.ಪಂ. ಸದಸ್ಯರಾದ ಸಂತೋಷ್ ಕುಮಾರ್ ಜೈನ್, ಹಾಗೂ ಇತರರು ಭೇಟಿ ನೀಡಿ ಪರಿಶೀಲಿಸಿದರು.
