ಬೆಳ್ತಂಗಡಿ: ಬೆಳ್ತಂಗಡಿಯ ಬಸ್ ನಿಲ್ದಾಣದ ಬಳಿ ಪ್ರಭಾತ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ ತೆರಿಗೆ ಸಲಹೆಗಾರ ಸಂದೇಶ ರಾವ್ ರವರ ಕಛೇರಿಯು ಸ್ಥಳಾಂತರಗೊಂಡು ಇದರ ಸ್ಥಳಾಂತರಿತ ನೂತನ ಕಚೇರಿಯು ಬೆಳ್ತಂಗಡಿ ಭಾರತ್ ಪೆಟ್ರೋಲ್ ಬಂಕ್ ಸಮೀಪ ಇರುವ ಶ್ರೀ ಗುರು ಸಾನಿಧ್ಯ ಕಟ್ಟಡದ ಮೊದಲನೇ ಮಹಡಿಯಲ್ಲಿ ಮಾ.14 ರಂದು ಲಕ್ಷ್ಮೀಪೂಜೆ ಸಹಿತ ಶುಭಾರಂಭಗೊಂಡಿತು.

ಕಾರ್ಯಕ್ರಮವನ್ನು ಮಾಲಕರಾದ ಸಂದೇಶ ರಾವ್ ಮತ್ತು ಶ್ರೀಮತಿ ಅರ್ಚನ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗುರುದೇವ ಸೊಸೈಟಿಯ ಉಪಾಧ್ಯಕ್ಷ ಭಗೀರಥ. ಜಿ, ಪ್ರಕಾಶ್ ಎಲೆಕ್ಟ್ರಾನಿಕ್ಸ್ ಮಾಲಕರಾದ ಪುಷ್ಪರಾಜ್ ಶೆಟ್ಟಿ,
ಲಯನ್ಸ್ ಕ್ಲಬ್ ಬೆಳ್ತಂಗಡಿ ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ, ಲಯನ್ಸ್ ಅಶೋಕ್ ಕುಮಾರ್ ಬಿ.ಪಿ. ಉಪಸ್ಥಿತರಿದ್ದು, ಶುಭಹಾರೈಸಿದರು.