26.9 C
ಪುತ್ತೂರು, ಬೆಳ್ತಂಗಡಿ
March 15, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಸಂಸ್ಕಾರ ಭಾರತಿ ಮತ್ತು ಹನುಮೋತ್ಸವ ಸಮಿತಿ ಅಳದಂಗಡಿ ವತಿಯಿಂದ ಹನುಮೋತ್ಸವದ ಪೂರ್ವಭಾವಿ ಸಭೆ

ಅಳದಂಗಡಿ : ಸಂಸ್ಕಾರ ಭಾರತಿ ಬೆಳ್ತಂಗಡಿ ಮತ್ತು ಹನುಮೋತ್ಸವ ಸಮಿತಿ ಅಳದಂಗಡಿ ವತಿಯಿಂದ ಪಿಲ್ಯ ಮಹಮ್ಮಾಯೀ ಭಜನಾ ಮಂದಿರದಲ್ಲಿ ಕಾರ್ಯಕ್ರಮದ ಯಶಸ್ವಿಗೆ ಪೂರ್ವಭಾವಿ ಸಭೆ ನಡೆಯಿತು. ನಾವರ ಪಿಲ್ಯ, ಸುಲ್ಕೇರಿ, ಕುದ್ಯಾಡಿ ಗ್ರಾಮದ ಉಸ್ತುವಾರಿಗಳ ಸಭೆಯನ್ನು ಕರೆಯಲಾಗಿತ್ತು.

ಸಭೆಯಲ್ಲಿ ಅಳದಂಗಡಿ ಶ್ರೀ ಕ್ಲಿನಿಕ್ ಇಲ್ಲಿಯ ಪ್ರಸಿದ್ಧ ವೈದ್ಯರಾದ ಡಾ.ಎನ್.ಎಮ್ ತುಳುಪುಳೆ ಎ. 12 ರಂದು ಅಳದಂಗಡಿಯಲ್ಲಿ ನಡೆಯುವ ಹನುಮೋತ್ಸವ 2025 ರ ಲಾಂಛನ ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಭಜನಾ ಮಂದಿರದ ಅರ್ಚಕರಾದ ಶೇಷಗಿರಿ ಭಟ್ ಕಾರ್ಯಕ್ರಮದ ಯಶಸ್ವಿಗಾಗಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸಂಸ್ಕಾರ ಭಾರತಿ ತಾಲೂಕು ಅಧ್ಯಕ್ಷ ಸಂಪತ್ ಬಿ.ಸುವರ್ಣ ಹನುಮೋತ್ಸವದ ಬಗ್ಗೆ ಸವಿವರವಾದ ಮಾಹಿತಿ ನೀಡಿ ಸಂಪೂರ್ಣವಾಗಿ ಹನುಮೋತ್ಸವ ಯಶಸ್ವಿಯಾಗಲು ಪ್ರತೀ ಗ್ರಾಮದ ಹಿಂದೂ ಮನೆಗಳಿಗೂ ಆಮಂತ್ರಣ ಪತ್ರಿಕೆ ತಲುಪಿಸಬೇಕು ಮತ್ತು ಯಾಗದಲ್ಲಿ ವೃತಧಾರಿಗಳು ಭಾಗವಹಿಸುವಂತೆ ಮಾಡಬೇಕೆಂದು ಕೇಳಿಕೊಂಡರು.

ಸಮಾಲೋಚನಾ ಸಭೆಯಲ್ಲಿ ಸುಲ್ಕೇರಿ ಗ್ರಾ.ಪಂ‌.ಉಪಾಧ್ಯಕ್ಷ ಶುಭಕರ ಬಂಗೇರ ಸತೀಶ್ ಶಿರ್ಲಾಲು, ವಿಶ್ವನಾಥ ಬಂಗೇರ, ರಾಜೇಶ್ ಬುಣ್ಣಾನ್, ಉಮೇಶ್ ಸುವರ್ಣ, ಹರೀಶ್ ಕಲ್ಲಾಜೆ ಪ್ರಶಾಂತ ಕರಂಬಾರು, ಸುಮನಾಜ ಪಾಡಿಪಿಲ್ಯ, ಆನಂದ ಪೂಜಾರಿ ಮಣಿಕಂಠ, ಶೈಲೇಶ್ ಪಾಡಿಪಿಲ್ಯ, ಸುಧೀರ್ ಪಾಡಿಪಿಲ್ಯ, ಪುನೀತ್ ಬಂಗೇರ, ಉಮೇಶ್ ಬಂಗೇರ, ಸತೀಶ್ ಬಂಗೇರ ದುಗ್ಗಲಚ್ಚಿಲ್, ಅವಿನಾಶ್ ಪಂಚರತ್ನ ನಾರಾಯಣ ಪೂಜಾರಿ ಪರಾರಿ, ರವಿ ಪೂಜಾರಿ ನಾವರ, ರಮಾನಾಥ ಪಾದೆಮಾರಡ್ಡ, ಮುಂತಾದ ಪ್ರಮುಖರು ಭಾಗವಹಿಸಿದ್ದರು.

ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ನಾವರ ಸ್ವಾಗತಿಸಿ , ಸಂಚಾಲಕ ನಿತ್ಯಾನಂದ ಎನ್ ನಾವರ ಧನ್ಯವಾದ ಸಲ್ಲಿಸಿದರು.

Related posts

ಬೆಳ್ತಂಗಡಿ: ಸ.ಪ್ರ.ದ. ಕಾಲೇಜಿನಲ್ಲಿ ರೋವರ್ ರೇಂಜರ್ ಹಾಗೂ ಯುವ ರೆಡ್ ಕ್ರಾಸ್ ಘಟಕದ ಚಟುವಟಿಕೆಗಳ ಉದ್ಘಾಟನೆ

Suddi Udaya

ಧರ್ಮಸ್ಥಳ ರುಡ್ ಸೆಟ್ ಸಂಸ್ಥೆಗಳ ನಿರ್ದೇಶಕರ ಮತ್ತು ಉಪನ್ಯಾಸಕರುಗಳ ವಾರ್ಷಿಕ ಕಾರ್ಯಾಗಾರ

Suddi Udaya

ಚಿತ್ರೀಕರಣ ಪೂರ್ಣಗೊಳಿಸಿದ ಕೃಷ್ಣ ಬೆಳ್ತಂಗಡಿ ನಿರ್ದೇಶನದ “ಇದು ನಮ್ ಶಾಲೆ”

Suddi Udaya

ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಕಾಲಿಟ್ಟ ವಿಕ್ರಮ್ ಲ್ಯಾಂಡರ್ : ಇತಿಹಾಸ ಸೃಷ್ಟಿಸಿದ ಭಾರತ

Suddi Udaya

ಪಡಂಗಡಿ: ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya

ದಿವ್ಯಾಂಗರಿಗೆ ಗಾಲಿ ಕುರ್ಚಿ ಗಳ ವಿತರಣೆ

Suddi Udaya
error: Content is protected !!