ಲಾಯಿಲ : ಹಿರಿಯ ದಲಿತ ನಾಯಕ , ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾಗಿದ್ದ ದಿ. ಚಂದು ಎಲ್ ರವರ ಸಹೋದರ , ಲಾಯಿಲ ಗ್ರಾಮದ ನಿನ್ನಿಕಲ್ಲು ನಿವಾಸಿ ಮಾಯಿಲ(ರಮೇಶ್)(56) ರವರು ಅಲ್ಪಕಾಲದ ಅನಾರೋಗ್ಯದಿಂದ ಮಾರ್ಚ್ 15 ರಂದು ಶನಿವಾರ ಸ್ವಗೃಹದಲ್ಲಿ ನಿಧನರಾದರು.
ಹಿರಿಯ ಸೆಂಟ್ರಿಂಗ್ ಮೇಸ್ತ್ರಿಯಾಗಿದ್ದ ಅವರು ದಲಿತ ಚಳವಳಿಯಲ್ಲಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಸುನಂದಾ , ಪುತ್ರ ಸುದೀಪ್ , ಪುತ್ರಿ ಸುಪ್ರಿಯಾ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಮನೆಗೆ ಹಿರಿಯ ಉದ್ಯಮಿ , ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ನಡ ಇದರ ಅಧ್ಯಕ್ಷ ಸಯ್ಯದ್ ಹಬೀಬ್ ಸಾಹೇಬ್ , ಲಾಯಿಲ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ , ದಸಂಸ (ಅಂಬೇಡ್ಕರ್ ವಾದ) ಮೈಸೂರು ವಿಭಾಗ ಸಂಘಟನಾ ಸಂಚಾಲಕ ಬಿ.ಕೆ ವಸಂತ್ , ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ನೇಮಿರಾಜ್ ಕಿಲ್ಲೂರು , ದಸಂಸ (ಅಂಬೇಡ್ಕರ್ ವಾದ) ಸಂಚಾಲಕ ರಮೇಶ್ ಆರ್ , ಹಿರಿಯ ದಲಿತ ನಾಯಕರಾದ ವೆಂಕಣ್ಣ ಕೊಯ್ಯೂರು , ಸಂಜೀವ ಆರ್ , ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಚೆನ್ನಕೇಶವ , ಮುಂಡಾಜೆ ಸಿಎ ಬ್ಯಾಂಕ್ ನಿರ್ದೇಶಕ ರಾಘವ ಕಲ್ಮಂಜ , ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ನಿವೃತ್ತ ನೌಕರ ಶೀನ ಧರ್ಮಸ್ಥಳ ಸೇರಿದಂತೆ ನೂರಾರು ಜನರು ಭಾಗವಹಿಸಿ ಅಂತಿಮ ದರ್ಶನ ಪಡೆದರು.