September 6, 2026
ನಿಧನ

ಹಿರಿಯ ದಲಿತ ನಾಯಕ , ತಾ. ಪಂ ಮಾಜಿ ಉಪಾಧ್ಯಕ್ಷ ದಿ. ಚಂದು ಎಲ್ ರವರ ಸಹೋದರ , ಮಾಯಿಲ (ರಮೇಶ್ )ವಿಧಿವಶ

ಲಾಯಿಲ : ಹಿರಿಯ ದಲಿತ ನಾಯಕ , ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾಗಿದ್ದ ದಿ. ಚಂದು ಎಲ್ ರವರ ಸಹೋದರ , ಲಾಯಿಲ ಗ್ರಾಮದ ನಿನ್ನಿಕಲ್ಲು ನಿವಾಸಿ ಮಾಯಿಲ(ರಮೇಶ್)(56) ರವರು ಅಲ್ಪಕಾಲದ ಅನಾರೋಗ್ಯದಿಂದ ಮಾರ್ಚ್ 15 ರಂದು ಶನಿವಾರ ಸ್ವಗೃಹದಲ್ಲಿ ನಿಧನರಾದರು.

ಹಿರಿಯ ಸೆಂಟ್ರಿಂಗ್ ಮೇಸ್ತ್ರಿಯಾಗಿದ್ದ ಅವರು ದಲಿತ ಚಳವಳಿಯಲ್ಲಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಸುನಂದಾ , ಪುತ್ರ ಸುದೀಪ್ , ಪುತ್ರಿ ಸುಪ್ರಿಯಾ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಮನೆಗೆ ಹಿರಿಯ ಉದ್ಯಮಿ , ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ನಡ ಇದರ ಅಧ್ಯಕ್ಷ ಸಯ್ಯದ್ ಹಬೀಬ್ ಸಾಹೇಬ್ , ಲಾಯಿಲ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ , ದಸಂಸ (ಅಂಬೇಡ್ಕರ್ ವಾದ) ಮೈಸೂರು ವಿಭಾಗ ಸಂಘಟನಾ ಸಂಚಾಲಕ ಬಿ.ಕೆ ವಸಂತ್ , ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ನೇಮಿರಾಜ್ ಕಿಲ್ಲೂರು , ದಸಂಸ (ಅಂಬೇಡ್ಕರ್ ವಾದ) ಸಂಚಾಲಕ ರಮೇಶ್ ಆರ್ , ಹಿರಿಯ ದಲಿತ ನಾಯಕರಾದ ವೆಂಕಣ್ಣ ಕೊಯ್ಯೂರು , ಸಂಜೀವ ಆರ್ , ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಚೆನ್ನಕೇಶವ , ಮುಂಡಾಜೆ ಸಿಎ ಬ್ಯಾಂಕ್ ನಿರ್ದೇಶಕ ರಾಘವ ಕಲ್ಮಂಜ , ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ನಿವೃತ್ತ ನೌಕರ ಶೀನ ಧರ್ಮಸ್ಥಳ ಸೇರಿದಂತೆ ನೂರಾರು ಜನರು ಭಾಗವಹಿಸಿ ಅಂತಿಮ ದರ್ಶನ ಪಡೆದರು.

Related posts

ಧರ್ಮಸ್ಥಳದ ಯುವತಿ,ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢ ಸಾವು

Suddi Udaya

ಬೈಕ್ ಢಿಕ್ಕಿಯಾಗಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪಾದಚಾರಿ ಚಿಕಿತ್ಸೆ ಫಲಿಸದೆ ಸಾವು

Suddi Udaya

ಧರ್ಮಸ್ಥಳದ ಲತಾ ಆನೆ ಹೃದಯಾಘಾತದಿಂದ ಸಾವು

Suddi Udaya

ಮೆಸ್ಕಾಂನ ನಿವೃತ್ತ ಜೂನಿಯರ್ ಇಂಜಿನಿಯರ್ ಪುಟ್ಟರಾಜು ನಿಧನ

Suddi Udaya

ಮೊಗ್ರು: ಕೋರಿಯಾರು ಎಂಬಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬಜಿರೆ: ಶ್ಯಾಮ ಹೆಗ್ಡೆ ಪೊಂಗರ್ತ್ಯಾರ್ ನಿಧನ

Suddi Udaya
error: Content is protected !!