ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುತ್ರಬೈಲು ಎಂಬಲ್ಲಿ ಕಸ ತ್ಯಾಜ್ಯಗಳನ್ನು ಎಸೆದವರಿಂದಲೇ ಕಸವನ್ನು ವಿಲೇವಾರಿ ಮಾಡಿಸಿ ರೂ. 3 ಸಾವಿರ ದಂಡ ವಿಧಿಸಿದ ಘಟನೆ ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ.

ಮಾ.15 ರಂದು ಪೂರ್ವಾಹ್ನ ಸುಮಾರು 11.30 ಕ್ಕೆ ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿ ಕಸ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ಎಸೆದು ಹೋದ ಬಗ್ಗೆ ಬೆಳಕಿಗೆ ಬಂದಿದ್ದು,ಕಸದ ಚೀಲವನ್ನು ಪರಿಶೀಲಿಸಿದ ಸ್ಥಳೀಯರಾದ ಗಣೇಶ್ ಪ್ರಸಾದ್ ರವರು ಹೆಚ್ಚಿನ ಮುತುವರ್ಜಿ ವಹಿಸಿ ಕೆಲವೊಂದು ದಾಖಲೆಗಳೊಂದಿಗೆ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಪಂಚಾಯತ್ ಲೆಕ್ಕಸಹಾಯಕರಾದ ಸುಪ್ರೀತಾ ಶೆಟ್ಟಿಯವರ ಬಳಿ ವಿಷಯ ತಿಳಿಸಿದ ಕೂಡಲೇ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಸದ ಚೀಲವನ್ನು ಪರಿಶೀಲಿಸಿ ಸಂಬಂಧ ಪಟ್ಟ ವ್ಯಕ್ತಿಗಳನ್ನು ಸ್ಥಳಕ್ಕೆ ಕರೆಸಿ ತ್ಯಾಜ್ಯ ವಿಲೇವಾರಿ ಮಾಡಿಸಿದ್ದಲ್ಲದೇ ದಂಡನ ಶುಲ್ಕವನ್ನು ವಿಧಿಸಿದರು.

ಹೆಚ್ಚಿನ ಪರಿಶೀಲನೆ ನಡೆಸಿ ಇನ್ನೂ 3 ತ್ಯಾಜ್ಯಗಳ ಚೀಲಗಳು ರಸ್ತೆ ಬದಿ ಎಸೆದಿರುವುದು ಕಂಡುಬಂದಿದ್ದು, ಚೀಲಗಳನ್ನು ತೆರೆದಾಗ ಸಂಬಂಧ ಪಟ್ಟ ದಾಖಲೆಗಳು ದೊರೆತಿದ್ದು ಕೂಡಲೇ ಸಂಬಂಧಪಟ್ಟವರಿಗೆ ದೂರವಾಣಿ ಮೂಲಕ ಕರೆಸಿ ದಂಡನೆ ವಸೂಲಿ ಮಾಡಿಸಿದರು.

ಕಸ ವಿಲೇವಾರಿ ಮಾಡಿಸಿದ ಪಂಚಾಯತ್ ಪಿಡಿಓ ಶ್ರೀನಿವಾಸ್ ಡಿ.ಪಿ ಹಾಗೂ ಲೆಕ್ಕ ಸಹಾಯಕರಾದ ಸುಪ್ರಿತಾ ಶೆಟ್ಟಿಯವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಅರವಿಂದ ಸ್ಥಳೀಯರಾದ ಗಣೇಶ್ ಪ್ರಸಾದ್ ಮತ್ತು ಮನೆಯವರು ಶ್ರದ್ದೆಶ್ ಹಾಗೂ ಸಾರ್ವಜನಿಕರು ಹೆಚ್ಚಿನ ಹಾಜರಿದ್ದರು.