March 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಂಗಳೂರು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಗುರುವಾಯನಕೆರೆಯಲ್ಲಿ ನೂತನ ಶಾಖೆ ಉದ್ಘಾಟನೆ

ಗುರುವಾಯನಕೆರೆ : ಪಾಂಡುರಂಗ ಮಂದಿರ ಗುರುವಾಯನಕೆರೆ ಇಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವತಿಯಿಂದ 48 ದಿನಗಳ ಉಚಿತ ಯೋಗ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಪತಂಜಲಿ ಯೋಗ ಶಿಕ್ಷಣ ಸಮಿತಿ ಮಂಗಳೂರು ಇದರ ಮಕ್ಕಳ ವಿಭಾಗದ ಪ್ರಮುಖ ಪ್ರಸಾದ್ ರವರು ದೀಪ ಬೆಳಗಿಸಿ ಬೌದ್ಧಿಕ್ ನೀಡಿ ಯೋಗದ ಮಹತ್ವ, ಯೋಗ ನಡೆದು ಬಂದ ದಾರಿ, ಪ್ರಸ್ತುತ ದಿನಗಳಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಯೋಗ ಶಿಕ್ಷಣದ ಅನಿವಾರ್ಯತೆಯ ಕುರಿತು ಬಹಳ ಮಹತ್ವದ ವಿಚಾರಗಳನ್ನು ತಿಳಿಸಿಕೊಟ್ಟರು.

ಮುಖ್ಯ ಅತಿಥಿಯಾಗಿ ನಾಗರಿಕ ಸೇವಾ ಟ್ರಸ್ಟೀ ಶ್ರೀಮತಿ ವಿದ್ಯಾ ನಾಯಕ್ ಮಾತನಾಡಿ ಸಂಸ್ಕಾರ, ಸಂಘಟನೆ ,ಸೇವೆಯಂತಹ ಶಿಕ್ಷಣವನ್ನು ನೀಡುವುದರೊಂದಿಗೆ ಉತ್ತಮ ನಾಗರಿಕರನ್ನು ರೂಪಿಸುವ ಕೆಲಸವನ್ನು ಸಮಿತಿ ಮಾಡುತ್ತಿದೆ ಎನ್ನುವುದರೊಂದಿಗೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ನಮ್ಮ ಮನೆ ಯೋಗ ಶಿಕ್ಷಕ ಭುಜಂಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಖೆಯ ಮುನ್ನಲೆಗೆ ಶುಭಹಾರೈಸಿದರು. ಯೋಗ ಶಿಕ್ಷಣ ಸಮಿತಿಯ ಮಂಗಳೂರು ಪ್ರಾಂತ ಪ್ರಮುಖರಾದ ರವೀಶ , ಯೋಗ ಶಿಕ್ಷಣ ಸಮಿತಿಯ ಆನಂದ, ಮಾರ್ಗದರ್ಶಕರು ಯೋಗ ಶಿಕ್ಷಣ ಸಮಿತಿ ಉಪ್ಪಿನಂಗಡಿ ತಾಲುಕು , ಪ್ರದೀಪ ಯೋಗ ಶಿಕ್ಷಣ ಸಮಿತಿಯ ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರು ಸೇರಿ 105 ಮಂದಿ ಉಪಸ್ಥಿತರಿದ್ದರು. ನಮ್ಮ ಮನೆ ಶಾಖೆಯ ಶಿಕ್ಷಕ ಶಿವಣ್ಣ ಸ್ವಾಗತಿಸಿ, ಶಿಕ್ಷಕಿ ದಮಯಂತಿ ವಂದಿಸಿ, ಶಿಕ್ಷಕಿ ಭಾರತಿ ನಿರೂಪಿಸಿದರು. ನಮ್ಮ ಮನೆ ಯೋಗ ಬಂಧುಗಳಾದ ಪುರಂದರ, ಗಿರೀಶ ,ಅಶೋಕ, ಪ್ರಿಯ ,ಆಶಾ ಯೋಗದ ಅನುಭವಗಳನ್ನು ಹಂಚಿಕೊಂಡರು. ನಮ್ಮ ಮನೆ ಗುರುವಾಯನಕೆರೆ ಶಾಖೆಯ ಯೋಗ ಶಿಕ್ಷಕ ಬಂಧುಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Related posts

ರಾಷ್ಟ್ರಮಟ್ಟದ ನೃತ್ಯೋತ್ಸವ: ಧರಿತ್ರಿ ಭಿಡೆ ದ್ವಿತೀಯ

Suddi Udaya

ಎಸ್ ವಿ ಟಿ ಟೀಮ್ ಪಟ್ರಮೆ ವತಿಯಿಂದ ದೀಪಾವಳಿ ಪ್ರಯುಕ್ತ ವಾಲಿಬಾಲ್ ಪಂದ್ಯಾಟ

Suddi Udaya

ಲಾಯಿಲ: ಎಸ್. ಡಿ. ಪಿ. ಐ ವತಿಯಿಂದ ಹಳೆಪೇಟೆ ವ್ಯಾಪ್ತಿಯಲ್ಲಿ ನ್ಯಾಯ ಬೆಲೆ ಅಂಗಡಿಗಾಗಿ ಆಹಾರ ನಿರೀಕ್ಷಕರಿಗೆ ಮನವಿ

Suddi Udaya

ಉಜಿರೆ ಮಹಿಳಾ ವಿವಿದ್ದೋದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಶಶಿಕಲಾ ಡಿ ಗೌಡ , ಉಪಾಧ್ಯಕ್ಷರಾಗಿ ಪ್ರಮೀಳಾ

Suddi Udaya

ಎಕ್ಸಲೆಂಟ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಹೊಸಂಗಡಿ ಗ್ರಾಮ ಪಂಚಾಯತಿಗೆ ಭೇಟಿ

Suddi Udaya

ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಶಾಂತಿವನದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!