ಕಡಿರುದ್ಯಾವರ ಶ್ರೀ ವಿದ್ಯಾ ಸರಸ್ವತಿ ಮಹಿಳಾ ಮಂಡಲದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಲೋಕೇಶ್ವರಿ ವಿನಯಚಂದ್ರ ವಹಿಸಿದ್ದರು.
ಸಭೆಯನ್ನು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಸುರೇಖ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಮಾಜಿ ತಾಲೂಕು ಪಂಚಾಯತಿ ಸದಸ್ಯೆ , ಮಾಜಿ ಮಹಿಳಾ ಮಂಡಲ ಒಕ್ಕೂಟ ಅಧ್ಯಕ್ಷೆ ಶ್ರೀಮತಿ ಭಾರತಿ ಹೆಬ್ಬಾರ್ , ಹಿರಿಯರಾದ ಶ್ರೀಮತಿ ವರದಾಬಾಯಿ ಉಪಸ್ಥಿತರಿದ್ದರು.
ಗ್ರಾಮದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಾಲ್ಕು ಜನ ಮಹಿಳೆಯರಾದ ಶ್ರೀಮತಿ ಭಾರತಿ ಹೆಬ್ಬಾರ್, ಶ್ರೀಮತಿ ರುಕ್ಮಿನಿ ಲೋಕಯ್ಯ ಗೌಡ, ಗಾಯತ್ರಿ ಕೂಸಪ್ಪ ಮಲೆಕುಡಿಯ , ಶ್ರೀಮತಿ ಲಿಸಿ ಜೋರ್ಜ್ ರವರನ್ನು ಸ್ಮರಣಿಕೆಯೊಂದಿಗೆ ಸೀರೆ ಹೊದಿಸಿ ಸನ್ಮಾನಿಸಲಾಯಿತು.
ಸೀಬಾ ಜೋರ್ಜ್, ಸೌಮ್ಯ ನಾಯ್ಕ, ಶ್ರೀಮತಿ ಡೀಕಮ್ಮ, ಶ್ರೀಮತಿ ರೋಸಮ್ಮ , ಶ್ರೀಮತಿ ವಸಂತಿ, ಶ್ರೀಮತಿ ಭವ್ಯಶ್ರೀ ಕಾರ್ಯಕ್ರಮದಲ್ಲಿ ಸಹಕರಿಸಿದರು. ಶ್ರೀಮತಿ ರಮಾ ಪರಂಜಪೆ ಸ್ವಾಗತಿಸಿದರು. ಶ್ರೀಮತಿ ಭಾರತೀ ಉದ್ಧಾರ ನಿರೂಪಿಸಿ, ಶ್ರೀಮತಿ ನಳಿನಿ ವಂದಿಸಿದರು.