32.6 C
ಪುತ್ತೂರು, ಬೆಳ್ತಂಗಡಿ
March 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಹಿರಿಯ ಯಕ್ಷಗಾನ ಕಲಾವಿದ ಬಿ. ಗೋಪಾಲಕೃಷ್ಣ ನಿಧನ

ಬೆಳ್ತಂಗಡಿ: ಯಕ್ಷಗಾನ ಮತ್ತು ಚೆಂಡೆ-ಮದ್ದಲೆ ಕಲಾವಿದ, ಯಕ್ಷಗುರು ಬಿ. ಗೋಪಾಲಕೃಷ್ಣ ಕುರುಪ್ (90) ಕಾಸರಗೊಡಿನ ನೀಲೇಶ್ವದ ಪಟ್ಟೇನದಲ್ಲಿ ಮಾ.18 ರಂದು ರಾತ್ರಿ ನಿಧನರಾಗಿದ್ದಾರೆ.

ಕೇರಳ ಮೂಲದವರಾದ ಇವರು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಶಿಶಿಲದಲ್ಲಿ ನೆಲೆಸಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಮತ್ತು ಪುತ್ರ ಇದ್ದಾರೆ.

ಚೆಂಡೆ ಮತ್ತು ಮದ್ದಲೆಯ ತಾಳ-ಲಯವನ್ನು ಮೈಗೂಡಿಸಿಕೊಂಡಿದ್ದ ಕುರುಪ್ ಅವರು ತೆಂಕು ತಿಟ್ಟಿನಲ್ಲಿ ಲಭ್ಯವಿರುವ ಅಧಿಕೃತ ಪಠ್ಯವನ್ನು ಬಳಸಿ ಪುಸ್ತಕಗಳನ್ನು ಬರೆದಿದ್ದಾರೆ. 60 ವರ್ಷಗಳಿಗೂ ಹೆಚ್ಚು ಕಾಲ ಯಕ್ಷಗಾನ ಪಾಠ ಹೇಳಿ ದೊಡ್ಡ ಶಿಷ್ಯ ಪರಂಪರೆಯನ್ನು ಬೆಳೆಸಿದ್ದರು. ಪರಂಪರೆಯ ತೆಂಕುತಿಟ್ಟಿನ ಭಾಗವತಿಕೆ ಅಥವಾ ಹಳೆಯ ಕ್ರಮದ ಪದ್ಯಗಳ ಗಾಯನದಲ್ಲಿ ಹೆಸರು ಗಳಿಸಿದ್ದರು.

Related posts

ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಸಂಭ್ರಮ: ಸುಳ್ಯ ಶಾಸಕಿ ಶ್ರೀಮತಿ ಭಾಗೀರಥಿ ಮುರುಳ್ಯ ಗೆ ಆಮಂತ್ರಣ

Suddi Udaya

ಪದ್ಮುಂಜ : ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಇತರ ಸಮಿತಿ ರಚನಾ ಸಭೆ

Suddi Udaya

ಜಿನಮಂದಿರಗಳ ಸ್ಥಳ ಹಾಗೂ ಅಭಿವೃದ್ಧಿಗೆ ಸಚಿವ ಡಿ. ಸುಧಾಕರ್ ರವರಿಗೆ ಮನವಿ

Suddi Udaya

ವೇಣೂರು ಗ್ರಾಮದಲ್ಲಿ ಸಾಮಾಜಿಕ ಅರಣ್ಯ ಕಾರ್ಯಕ್ರಮ; 2 ಸಾವಿರ ಗಿಡಗಳ ನಾಟಿ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಜನಾ ಸಮಿತಿಯಿಂದ ಕಜೆಕಾರು ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನದಲ್ಲಿ ನೂತನ ಕುಣಿತ ಭಜನಾ ತರಬೇತಿ ಉದ್ಘಾಟನೆ

Suddi Udaya

ಧರ್ಮಸ್ಥಳದಲ್ಲಿ “ಕೆಸರ್‌ಡ್ ಒಂಜಿ ದಿನ”

Suddi Udaya
error: Content is protected !!