September 6, 2026
ಧಾರ್ಮಿಕ

ಆಪರೇಷನ್ ಸಿಂದೂರ್ ಯಶಸ್ವಿ ಕಾರ್ಯಾಚರಣೆ ಭಾರತೀಯ ಸೈನ್ಯ ಹಾಗೂ ಸೈನಿಕರಿಗೆ ಶಕ್ತಿ ತುಂಬಲು ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ‘ಸಾಮೂಹಿಕ ವಿಷ್ಟು ಸಹಸ್ರನಾಮ ಪಠಣ’

ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ ನಾವೂರು ಇದರ ವತಿಯಿಂದ ಕಳೆದ ಕೆಲವು ದಿನಗಳಿಂದ ಹಿಂದೆ ಪುಹಲ್ಗಾಮ್‌ನಲ್ಲಿ ಭಯೋತ್ಪಾದಕರ ಪೈಚಾಶಿಕ ಕೃತ್ಯಕ್ಕೆ ‘ಆಪರೇಷನ್ ಸಿಂದೂರ್’ ಮೂಲಕ ಪ್ರತ್ಯುತ್ತರ ನೀಡಿ, ದೇಶದ ಗಡಿಯಲ್ಲಿ ಪಾಕ್ತಿಸ್ತಾನದ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಿರುವ ಭಾರತೀಯ ಸೈನ್ಯಕ್ಕೆ ಹಾಗೂ ಸೈನಿಕರಿಗೆ ಶಕ್ತಿ ನೀಡಲು ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ‘ಸಾಮೂಹಿಕ ವಿಷ್ಟು ಸಹಸ್ರನಾಮ ಪಠಣ’ ಹಾಗೂ ವಿಶೇಷ ಪೂಜೆ ಮೇ 10ರಂದು ಜರುಗಿತು.

ಬೆಳಿಗ್ಗೆ 5.15ರಿಂದ 6 ಗಂಟೆಯವರಿಗೆ ನಾವೂರಿನ ವೈದ್ಯರಾದ ಡಾ. ಪ್ರದೀಪ್ ಇವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ವಿಷ್ಟು ಸಹಸ್ರನಾಮ ಪಠಣ ನಡೆಯಿತು. ಬಳಿಕ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದೇಶದ ಗಡಿಯಲ್ಲಿ ಕಾರ್ಯಾರಣೆ ನಡೆಸುತ್ತಿರುವ ಭಾರತ ದೇಶದ ಸೈನ್ಯ ಹಾಗೂ ಸೈನಿಕರಿಗೆ ದೇವರು ಹೆಚ್ಚಿನ ಶಕ್ತಿ ಹಾಗೂ ಮನೋಬಲವನ್ನು ಕರುಣಿಸಲಿ ಎಂದು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ. ಮೋಹನ್‌ಕುಮಾರ್ ಹಾಗೂ ಎಕ್ಸೆಲ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಭಾಗವಹಿಸಿ, ದೇಶದ ಸೈನಿಕರಿಗೆ ಹಾಗೂ ಸೈನ್ಯಕ್ಕೆ ಶಕ್ತಿ ತುಂಬಲು ನಾವೂರು ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ. ಪ್ರದೀಪ್ ಕುಮಾರ್ ಮಾತನಾಡಿ, ಸೈನಿಕರಿಗೆ ಶಕ್ತಿ ತುಂಬುವ ಕಾರ್ಯ ದೇಶದಾದ್ಯಂತ ನಡೆಯುತ್ತಿದ್ದು, ನಾವೂರಿನಲ್ಲಿಯೂ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಮೂಲಕ ನಡೆದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಹರೀಶ್ ಸಾಲ್ಯಾನ್ ಮೊರ್ತಾಜೆ, ಹರೀಶ್ ಕಾರಿಂಜ, ಗಣೇಶ್ ಗೌಡ, ಶಾಲಾ ಮುಖ್ಯೋಪಾಧ್ಯಾಯರಾದ ರಾಜೇಂದ್ರ, ಕರುಣಾಕರ್ ಬೋಜಾರ, ಶ್ರೀನಾಥ್ ಹಾಗೂ ಟ್ರಸ್ಟ್‌ನ ಪದಾಧಿಕಾರಿಗಳು, ನಾವೂರು ಹಾಗೂ ನಡ ಗ್ರಾಮದ ಭಕ್ತರು ಉಪಸ್ಥಿತರಿದ್ದರು.

Related posts

ತುಳು ಚಿತ್ರರಂಗದ ಖ್ಯಾತ ನಟ ಅರವಿಂದ್ ಬೋಳಾರ್ ಸುಯ೯ ದೇವಸ್ಥಾನಕ್ಕೆ ಭೇಟಿ

Suddi Udaya

ಇತಿಹಾಸ ಪ್ರಸಿದ್ಧ ದೇವನಾರಿ ಅರ್ಧ ನಾರೀಶ್ವರ ದೇವಸ್ಥಾನಕ್ಕೆ ಆಡಳಿತ ಅಧಿಕಾರಿಯಿಂದ ಅಧಿಕಾರ ಸ್ವೀಕಾರ

Suddi Udaya

ಕಳೆಂಜ: ಶಿಬರಾಜೆಯ ಬ್ರಹ್ಮಲಿಂಗ ದೇವರಿಗೆ ವೃಶ್ಚಿಕ ಸಂಕ್ರಮಣದ ಪ್ರಯುಕ್ತ ವಿಶೇಷ ಅಭಿಷೇಕ ಪೂಜೆ

Suddi Udaya

ಶಿರ್ಲಾಲಿನಲ್ಲಿ 25ನೇ ವರ್ಷದ ಗುರುಪೂಜಾ ಕಾರ್ಯಕ್ರಮ

Suddi Udaya

ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾಮಠ ಕಾವೂರು ಮಂಗಳೂರು ಪೂಜ್ಯ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರಿಂದ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಟ್ರಸ್ಟ್‌ನ ಲೋಗೋ ಅನಾವರಣ

Suddi Udaya

ಬಳಂಜ: ಪರಮೇಶ್ವರಿಯ ಮೂಲಸ್ಥಾನದೆಡೆಗೆ ಭಕ್ತರ ನಡಿಗೆ “ಕೇರಿಂಜ ಯಾತ್ರೆ”

Suddi Udaya
error: Content is protected !!