38.6 C
ಪುತ್ತೂರು, ಬೆಳ್ತಂಗಡಿ
March 6, 2026
Uncategorizedಧಾರ್ಮಿಕ

ಶ್ರೀ ನಾಳ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಧರ್ಮಸಿಂಹಾಸನ ಬಯಲಾಟ

ನ್ಯಾಯತರ್ಪು : ಮಾ.18.ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಥಬೀದಿಯಲ್ಲಿ ಧರ್ಮ ಸಿಂಹಾಸನ ಎಂಬ ಬಯಲಾಟ ಮಾ.18 ರಂದು ನಡೆಯಿತು.

ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿಯವರ ಸಾರಥ್ಯದಲ್ಲಿ ಧರ್ಮ ಸಿಂಹಾಸನ ಎಂಬ ಪುಣ್ಯ ಕಥಾಭಾಗವನ್ನು ಬಯಲಾಟ ನಡೆಯಿತು.ನಾಳ,ಗೇರುಕಟ್ಟೆ ಯಕ್ಷಗಾನ ಕಲಾಭಿಮಾನಿಗಳು,ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ವ್ಯವಸ್ಥಾಪನಾ ಸಮಿತಿ,ಅಭಿವೃದ್ಧಿ ಸಮಿತಿ,ಭಜನಾ ಮಂಡಳಿ ಪದಾಧಿಕಾರಿಗಳು ಭಾಗವಹಿಸಿದರು.
ಈ ಸಂದರ್ಭದಲ್ಲಿ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕ್ಷೇತ್ರದ ಅಶ್ವಥಕಟ್ಟೆಯಲ್ಲಿ ಪ್ರಥಮ ವರ್ಷದ ಸಾರ್ವಜನಿಕ ಶನೈಶ್ವರ ಪೂಜೆ, ಧಾರ್ಮಿಕ ಸಭೆ ಹಾಗೂ ಯಕ್ಷಗಾನ ಬಯಲಾಟ ಎ.5 ರಂದು ನಡೆಯುವ ಆಮಂತ್ರಣ ಪತ್ರಿಕೆಯನ್ನು ಪಟ್ಲ ಸತೀಶ್ ಶೆಟ್ಟಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಬಿ,ದೇವಸ್ಥಾನದ ಪ್ರಧಾನ ಆರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣರು, ಸದಸ್ಯರಾದ ಶರತ್ ಕುಮಾರ್ ಶೆಟ್ಟಿ ಕೆ.ನೀನಾ ಕುಮಾರ್,ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಯಂ,ಕಾರ್ಯದರ್ಶಿ ರಾಜೇಶ್ ಪೆರ್ಬುಂಡ, ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ, ದೇವಸ್ಥಾನದ ಪ್ರಬಂಧಕ ಗಿರೀಶ್ ಶೆಟ್ಟಿ ಹಾಗೂ ಭಕ್ತರ ಉಪಸ್ಥಿತರಿದ್ದರು.

Related posts

ಫೆ.26: ಪ್ರಸಿದ್ಧ ಸಿರಿಗಳ ಆಲಡೆ ಕ್ಷೇತ್ರ ಲೋಕನಾಡು ನಡ್ವಾಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ವಿಶೇಷ ಕಾರ್ಯಕ್ರಮ

Suddi Udaya

ಓಡಿಲ್ನಾಳ : ಮೈರಲ್ಕೆ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರಥಮ ವರ್ಷದ ಶ್ರೀ ಶಾರದೋತ್ಸವ: ಧಾರ್ಮಿಕ ಸಭೆ

Suddi Udaya

ಪಕ್ಷೇತರ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಭಟ್ ನಾಮಪತ್ರ ಸಲ್ಲಿಕೆ

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Suddi Udaya

ಅಳದಂಗಡಿಯಲ್ಲಿ ಭಕ್ತಿ ಭಾವದಿಂದ ಮೊಳಗಿದ ಹನುಮೋತ್ಸವ, ಸಾವಿರಾರು ಭಕ್ತರು ಭಾಗಿ ಕುಣಿತ ಭಜನೆ, ಹನುಮ ಯಾಗ, ಹನುಮಾನ್ ಚಾಲಿಸ ಪಠಣ, ಹನುಮ ಶ್ರೀರಕ್ಷೆ ವಿತರಣೆ, ಲಂಕಾದಹನ, ಶಿವಾಜಿ‌ ನಾಟಕ

Suddi Udaya

ಬೆಳ್ತಂಗಡಿ ಮಾತೃಶ್ರೀ ಸಿಲ್ಕ್ ನಲ್ಲಿ ಅಮೋಘ ದರಕಡಿತ ಮಾರಾಟ, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

Suddi Udaya
error: Content is protected !!