March 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಹಿರಿಯ ಯಕ್ಷಗಾನ ಕಲಾವಿದ ಬಿ. ಗೋಪಾಲಕೃಷ್ಣ ನಿಧನ

ಬೆಳ್ತಂಗಡಿ: ಯಕ್ಷಗಾನ ಮತ್ತು ಚೆಂಡೆ-ಮದ್ದಲೆ ಕಲಾವಿದ, ಯಕ್ಷಗುರು ಬಿ. ಗೋಪಾಲಕೃಷ್ಣ ಕುರುಪ್ (90) ಕಾಸರಗೊಡಿನ ನೀಲೇಶ್ವದ ಪಟ್ಟೇನದಲ್ಲಿ ಮಾ.18 ರಂದು ರಾತ್ರಿ ನಿಧನರಾಗಿದ್ದಾರೆ.

ಕೇರಳ ಮೂಲದವರಾದ ಇವರು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಶಿಶಿಲದಲ್ಲಿ ನೆಲೆಸಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಮತ್ತು ಪುತ್ರ ಇದ್ದಾರೆ.

ಚೆಂಡೆ ಮತ್ತು ಮದ್ದಲೆಯ ತಾಳ-ಲಯವನ್ನು ಮೈಗೂಡಿಸಿಕೊಂಡಿದ್ದ ಕುರುಪ್ ಅವರು ತೆಂಕು ತಿಟ್ಟಿನಲ್ಲಿ ಲಭ್ಯವಿರುವ ಅಧಿಕೃತ ಪಠ್ಯವನ್ನು ಬಳಸಿ ಪುಸ್ತಕಗಳನ್ನು ಬರೆದಿದ್ದಾರೆ. 60 ವರ್ಷಗಳಿಗೂ ಹೆಚ್ಚು ಕಾಲ ಯಕ್ಷಗಾನ ಪಾಠ ಹೇಳಿ ದೊಡ್ಡ ಶಿಷ್ಯ ಪರಂಪರೆಯನ್ನು ಬೆಳೆಸಿದ್ದರು. ಪರಂಪರೆಯ ತೆಂಕುತಿಟ್ಟಿನ ಭಾಗವತಿಕೆ ಅಥವಾ ಹಳೆಯ ಕ್ರಮದ ಪದ್ಯಗಳ ಗಾಯನದಲ್ಲಿ ಹೆಸರು ಗಳಿಸಿದ್ದರು.

Related posts

ಬೆಳ್ತಂಗಡಿ: ಬಜರಂಗದಳ ಸಂಘಟನೆ ಹಾಗೂ ಶರಣ್ ಪಂಪುವೆಲ್ ರವರ ಮೇಲೆ ಅವಮಾನಕರ ಪೋಸ್ಟ್ ಮತ್ತು ವಿಡೀಯೋ ಹಾಕಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ

Suddi Udaya

ಶಿರ್ಲಾಲು ವಿಶ್ವ ಹಿಂದೂ ಪರಿಷತ್‌ ವತಿಯಿಂದ ಆರ್ಥಿಕ ನೆರವು

Suddi Udaya

ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ: ಪಹಣಿಗಳಿಗೆ ಆಧಾರ್ ಜೋಡನೆ ಆಂದೋಲನ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಜಾತ್ರೋತ್ಸವದ ಕಾರ್ಯಾಧ್ಯಕ್ಷರಾಗಿ ಶೈಲೇಂದ್ರ ಸುವರ್ಣ

Suddi Udaya

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳ ಮಗು ಸಾವು: ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಶಾಸಕ ವಸಂತ ಬಂಗೇರ ಸೂಕ್ತ ತನಿಖೆಗೆ ಒತ್ತಾಯ

Suddi Udaya
error: Content is protected !!