ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಿರಿ ಸಂಸ್ಥೆಯ ನೂತನ ಉತ್ಪಾದನಾ ಸಂಕೀರ್ಣದ ಪೂಜಾ ಸಮಾರಂಭ: ಡಾ.ಹೆಗ್ಗಡೆ ಕುಟುಂಬಸ್ಥರು, ಸಿರಿ ಸಂಸ್ಥೆಯ ನಿರ್ದೇಶಕರುಗಳು ಭಾಗಿ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ವೀ. ಹೆಗ್ಗಡೆಯವರ ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ಖರೀದಿಸಲಾದ ಸುಮಾರು ಏಳು ಎಕರೆ ಪ್ರದೇಶದಲ್ಲಿ ಒಟ್ಟು 1.50 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಬೆಳ್ತಂಗಡಿಯ ರೆಂಕೆದಗುತ್ತುವಿನಲ್ಲಿ ನಿರ್ಮಾಣಗೊಂಡ ಸಿರಿ ಸಂಸ್ಥೆಯ ನೂತನ ಉತ್ಪಾದನಾ ಸಂಕೀರ್ಣವು ಮಾ.20ರಂದು ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳೊಂದಿಗೆ ಶುಭಾರಂಭಗೊಂಡಿತು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ, , ಹೇಮಾವತಿ ವೀ.ಹೆಗ್ಗಡೆ, ಡಿ.ಹಷೇ೯ಂದ್ರ ಕುಮಾರ್ ಸುಪ್ರೀಯ ಹಷೇ೯ಂದ್ರ ಕುಮಾರ್, ಶ್ರದ್ಧಾ ಅಮಿತ್, ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾದ೯ನ್, ಸೋನಿಯಾ ವಮ೯, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ವಸತಿ ನಿಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರನ್ ವಮ೯, ಸಿರಿ ನಿದೇ೯ಶಕ ರಾಜೇಶ್ ಪೈ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ, ನಾಗೇಂದ್ರ ಗುರೂಜಿ, .ಡಾ.ಜಯಕುಮಾರ್ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರು, ಸರ್ವ ಸದಸ್ಯರು ಮತ್ತು ಸಿರಿ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Related posts

ಕಡಿರುದ್ಯಾವರ: ಪಣಿಕಲ್ಲು ಎಂಬಲ್ಲಿ ತೋಟಕ್ಕೆ ಕಾಡಾನೆ ದಾಳಿ: ಅಪಾರ ಕೃಷಿ ಹಾನಿ

Suddi Udaya

ಎ.ಆರ್.ಎಂ ಮೋಟಾರ್ಸ್ ನಲ್ಲಿ ಕಿಯಾ ಕಂಪನಿಯ ‘ನ್ಯೂ ಸೆಲ್ಟೋಸ್’ ಕಾರು ಬಿಡುಗಡೆ

Suddi Udaya

ಸಿಯೋನ್ ಆಶ್ರಮ ಟ್ರಸ್ಟ್ ಮತ್ತು ಆಲ್‌ಕಾರ್ಗೋ ಲೋಜಿಸ್ಟಿಕ್ಸ್ ಲಿ. ಸಹಭಾಗಿತ್ವದೊಂದಿಗೆ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ

Suddi Udaya

ನೆಲ್ಯಾಡಿಯಲ್ಲಿ ಉದನೆ ವಲಯ ಮಟ್ಟದ ಮಾತೃಸಂಗಮ ‘ಫಿದೆಲಿಯುಂ–2026’

Suddi Udaya

ಸೌಜನ್ಯ ಹತ್ಯೆ ಪ್ರಕರಣ: ನೈಜ‌ ಆರೋಪಿಗಳ ಪತ್ತೆ‌‌ ಹಚ್ಚಿ ಶಿಕ್ಷಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡನೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಕೆನರಾ ಬ್ಯಾಂಕಿನ ಡಿಜಿಎಮ್ , ಮಂಗಳೂರು ರೀಜಿನಲ್ ಮೆನೇಜರ್ ಹಾಗೂ ರುಡ್ ಸೆಟ್ ಅಧಿಕಾರಿಗಳು ಭೇಟಿ: ದೇವರಿಗೆ ರಂಗಪೂಜೆ ಸೇವೆ

Suddi Udaya
error: Content is protected !!