ಬೆಳ್ತಂಗಡಿ: ಭಾರತೀಯ ಸಂಜಾತೆ ಸುನೀತ ವಿಲಿಯಮ್ಸ್ ಹಾಗೂ ಅಮೆರಿಕದ ಬುಚ್ ವಿಲ್ಮೋರ್ ರವರು ಬಾಹ್ಯಾಕಾಶ ದಿಂದ ನಿನ್ನೆ ಬೆಳಿಗ್ಗೆ 3.27 ಕ್ಕೆ ಭೂಮಿಗೆ ಬಂದಿಳಿದ ಐತಿಹಾಸಿಕ ಸಾಹಸದ ಕ್ಷಣದ ದೃಶ್ಯಗಳನ್ನು ಎಲ್ಲಾ ಮಕ್ಕಳಿಗೂ ತೋರಿಸಿ , ಸಾಧನೆ ತೋರಿದ ಈ ಸಾಧಕರಿಗೆ ಸಮಸ್ತ ವಿದ್ವತ್ ವಿದ್ಯಾರ್ಥಿ ಹಾಗೂ ಬೋಧಕ ಸಿಬ್ಬಂದಿ ಗೌರವ ಸೆಲ್ಯೂಟ್ ಸಮರ್ಪಣೆ ಮಾಡಿ, ಮಾ.20 ರಮದು ನಡೆದ ಕಾರ್ಯಕ್ರಮದಲ್ಲಿ ಅವರ ಸಾಧನೆಯನ್ನು ಕೊಂಡಾಡಿದರು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬಾಹ್ಯಾಕಾಶ ಸಂಶೋಧನೆಯಲ್ಲಿ ಮಕ್ಕಳು ಅಭ್ಯಾಸ ಮಾಡುವ ಭೌತಶಾಸ್ತ್ರ ದ ಥಿಯರಿ ಹೇಗೆ ಉಪಯೋಗಿಸಲ್ಪಡುತ್ತದೆ , ಭೌತಶಾಸ್ತ್ರ ವಿಷಯ ತಜ್ಞ, ಅತುಕುರಿ ನರೇಶ್ ವಿವರಿಸಿದರೆ, ರಸಾಯನ ಶಾಸ್ತ್ರ ದಲ್ಲಿ ಮಕ್ಕಳು ಕಲಿಯುವ ಥಿಯರಿಗಳು ಹೇಗೆ ಉಪಯೋಗಿಸಲ್ಪಡುತ್ತವೆ ಎಂಬುದನ್ನು, ರಸಾಯನಶಾಸ್ತ್ರ ವಿಷಯತಜ್ಞ, ಪ್ರಥಾಪ್ ದೊಡ್ಡಮನೆ ಯವರು ವಿವರಿಸಿದರು. ವೈಜ್ಞಾನಿಕ ಕುತೂಹಲ ಮೂಡಿಸುವ ಪ್ರಮುಖ ಉದ್ದೇಶ ಹೊಂದಿರುವ ಇನ್ಸ್ಪೈರ್ ವಿದ್ವತ್ ವೇದಿಕೆ ಈ ಕಾರ್ಯಕ್ರಮ ಆಯೋಜಿಸಿತ್ತು.
ನಂತರ ಗ್ರೂಪ್ ಕ್ಯಾಪ್ಟನ್ ರಾಹುಲ್ ಸ್ವಾಮಿ ಗೌರವ ವಂದನೆಯ ಕಾರ್ಯಕ್ರಮ ನೆರವೇರಿಸಿದರು.
ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ ಈ ಮಂಡಗಳಲೆ ಯವರು ಸುನೀತಾ ವಿಲಿಯಮ್ಸ್ ರವರ ಸಾಹಸಗಾಥೆಯ ವಿವರ ನೀಡಿ, ಪ್ರತಿಭಾವಂತರಿಗಿರುವ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಿದರು . ಸಂಸ್ಥೆಯ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿಯವರು ಉಪಸ್ಥಿತರಿದ್ದರು. ಕು. ಅನುಶ್ರೀ, ಜೀವಶಾಸ್ತ್ರ ಉಪನ್ಯಾಸಕಿ, ಕಾರ್ಯಕ್ರಮ ನಿರೂಪಿಸಿದರು.