ಮರೋಡಿ ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷರಾದ ರತ್ನಾಕರ ಬುಣ್ಣನ್ ರ ಅಧ್ಯಕ್ಷತೆಯಲ್ಲಿ ಮಹಿಳಾ ಗ್ರಾಮ ಸಭೆ ಹಾಗೂ ದೀಪ ಬೆಳಗಿಸಿ ಮಹಿಳಾ ದಿನಾಚರಣೆ ಅಚರಿಸಲಾಯಿತು.

ಪಂ ಅಬಿವೃದ್ಧಿ ಅಧಿಕಾರಿ ಆಶಾಲತಾ ಎಚ್ ಸ್ವಾಗತಿಸಿದರು. ಪಂಚಾಯತು ಸದಸ್ಯರು ಉಪಸ್ಥಿತರಿದ್ದರು.

ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಯಿತು .ಮಾವಿನಕಟ್ಟೆ ಶಾಲೆಯ ಶಿಕ್ಷಕ ಮತ್ತು ಶಿಕ್ಷಕಿಯರು ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿದರು. ಶಿಕ್ಷಕಿಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.