ಬೆಳ್ತಂಗಡಿ: ಬೈಲಂಗಡಿ ಅರಮನೆಯ ಪರಿವಾರ ದೈವಗಳಾದ ನೇರೊಳ್ದಡಿ ಕಲ್ಲುರ್ಟಿ ಪಂಜುರ್ಲಿ ದೈವಗಳ ವಾರ್ಷಿಕ ನೇಮೋತ್ಸವವು ಬೆಂದ್ರಾಳ ಗೋಪಾಲಕೃಷ್ಣ ಇರ್ವತ್ರಾಯರ ನೇತೃತ್ವದಲ್ಲಿ ಮಾ.21 ರಂದು ರಾತ್ರಿ ಜರುಗಿತು.


ಬೈಲಂಗಡಿ ಅರಮನೆಯ ಬೋಂಟ್ರರಾದ ಹಾರಗಂಡಿ ತಿಮ್ಮಪ್ಪ ಪೂಜಾರಿ, ಅಶೋಕ್ ಕುಮಾರ್ ಜೈನ್ ಹಳೆ ಕಕ್ಕಿಂಜೆ, ವಿಲಯದವರು ಮತ್ತು ಊರವರು ಉಪಸ್ಥಿತರಿದ್ದರು.