ಅಂಡಿಂಜೆ:ಅಂಡಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ವಿಕಲಚೇತನರಿಗಾಗಿ ವಿಶೇಷ ಗ್ರಾಮ ಸಭೆಯನ್ನು ಪಂಚಾಯತ್ ಅಧ್ಯಕ್ಷ ನಿತಿನ್ ಅವರ ಅಧ್ಯಕ್ಷತೆಯಲ್ಲಿ ಮಾ 24 ರಂದು ನಡೆಸಲಾಯಿತು.
ವಿಕಲಚೇತನರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಮಾಹಿತಿಯನ್ನು ತಾಲೂಕು ವಿಕಲಚೇತನರ ಮೇಲ್ವಿಚಾರಕರಾದ ಜೋನ್ ಬ್ಯಾಪ್ಟಿಸ್ಟ್ ಡಿಸೋಜ, ನೀಡಿದರು.
ಸಮುದಾಯ ಆರೋಗ್ಯ ಇಲಾಖೆಯ ಆರೋಗ್ಯ ಅಧಿಕಾರಿ ಶ್ರೀಮತಿ ಕಾವ್ಯರವರು ಗ್ರಾಮೀಣ ಆರೋಗ್ಯದ ಬಗ್ಗೆ ವಿವರಣೆ ಮತ್ತು ಮಾಹಿತಿಗಳನ್ನು ನೀಡಿದರು
ಪಂಚಾಯತ್ ಅಭಿವೃದ್ಧಿ ಆದಿಕಾರಿಯಾದ ರಾಘವೇಂದ್ರ ಪಾಟೀಲ್ ಪಂಚಾಯತ್ ನಿಂದ ವಿಕಲಚೇತನರಿಗೆ ನೀಡುವ ಸೌಲಭ್ಯಗಳ ಬಗ್ಗೆ ವಿವರಣೆಯನ್ನು ನೀಡಿದರು.
ಪಂಚಾಯತ್ ಅಧ್ಯಕ್ಷರಾದ ನಿತಿನ್ ಎಂ ಮಾತನಾಡಿ ಪಂಚಾಯತ್ ವ್ಯಾಪ್ತಿಯ ಎಲ್ಲಾ ವಿಕಲಚೇತನರು ಯಾವುದೇ ಅಂಜಿಕೆಯಿಲ್ಲದೆ ತಮ್ಮಸಮಸ್ಯೆಗಳನ್ನು ನಮ್ಮೆಲ್ಲರ ಗಮನಕ್ಕೆ ತರಬೇಕು. ಸಂಪೂರ್ಣ ರೀತಿಯಲ್ಲಿ ಎಲ್ಲಾ ಯೋಜನೆಗಳ ಸದುಪಯೋಗ ಪಡೆಯಬೇಕು ಎಂದರು.
ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶ್ವೇತಾ, ಕಾರ್ಯದರ್ಶಿ ಶ್ರೀಮತಿ ಚಂಪಾ ಮತ್ತು ಪಂಚಾಯತ್ ನ ಎಲ್ಲಾ ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಶೀನ ಸ್ವಾಗತಿಸಿ,ಶ್ರೀಮತಿ ಮಮತಾ ವಂದಿಸಿದರು.ಒಟ್ಟು 54 ಜನ ವಿಕಲಚೇತನರು ಸಭೆಯ ಸದುಪಯೋಗ ಪಡೆದುಕೊಂಡರು.