
ಬೆಳ್ತಂಗಡಿ : ಸಯ್ಯದ್ ಉಮರ್ ಅಸ್ಸಖಾಫ್ ಮನ್ ಶರ್ ತಂಗಳ್ ರವರ ನೇತೃತ್ವದ ಗೇರುಕಟ್ಟೆ ಮನ್ ಶರ್ ಪ್ಯಾರಾಮೆಡಿಕಲ್ ಕಾಲೇಜು ಕರ್ನಾಟಕ ರಾಜ್ಯ ಪ್ಯಾರಾಮೆಡಿಕಲ್ ಬೋರ್ಡ್, ಇತ್ತೀಚೆಗೆ ಪ್ರಕಟಗೊಳಿಸಿರುವ ರ್‍ಯಾಂಕನ್ನು DMIT (x-ray) ವಿಭಾಗದಲ್ಲಿ ರಾಜ್ಯಕ್ಕೆ ಮರಿಯಮ್ ಬೀವಿಯವರು ಪ್ರಥಮ ರ್‍ಯಾಂಕನ್ನು, ಬಿ.ವೈ ಸಫೀನಾ ರಾಜ್ಯಕ್ಕೆ ದ್ವಿತೀಯ ರ್‍ಯಾಂಕನ್ನು, ಫಾತಿಮಾ ಸಫಾ ರಾಜ್ಯಕ್ಕೆ ತೃತೀಯ ರ್‍ಯಾಂಕನ್ನು ಕ್ರಮವಾಗಿ ಪಡೆದು ಅಪ್ರತಿಮ ಸಾಧನೆಯನ್ನು ಮಾಡಿ ಗ್ರಾಮೀಣ ಪ್ರದೇಶದ ಕಾಲೇಜಿನ ಹೆಸರನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಅಲ್ಲದೆ DMLT ವಿಭಾಗಕ್ಕೆ ಅಫೀಫ 5ನೇ ರ್‍ಯಾಂಕ್, DMIT ವಿಭಾಗದಲ್ಲಿ ನಾಫಿಯ ಬಾನು 9ನೇ ರ್‍ಯಾಂಕ್, ಹಾಗೂ DMIT ವಿಭಾಗದಲ್ಲಿ ರಿಹಾನಾಜ್ 10 ನೇ ರ್‍ಯಾಂಕನ್ನು ಪಡೆದಿದ್ದಾರೆ. ರ್‍ಯಾಂಕ್ ಗಳಿಸಿರುವ ವಿದ್ಯಾರ್ಥಿಗಳನ್ನು,ಇದರ ಹಿಂದೆ ಬೆನ್ನೆಲುಬಾಗಿ ನಿಂತ ಶಿಕ್ಷಕ ವೃಂದದವರನ್ನು,ಪೋಷಕರನ್ನು ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ವರ್ಷಕ್ಕೆ ಪ್ರವೇಶ ಆರಂಭಗೊಂಡಿದ್ದು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಮುಗಿಸುತ್ತಿರುವ ವಿದ್ಯಾರ್ಥಿಗಳ ಅರ್ಜಿ ಸ್ವೀಕರಿಸಲಾಗುವುದು ಎಂದು ಪ್ಯಾರಾ ಮೆಡಿಕಲ್ ಪ್ರಾಂಶುಪಾಲರಾದ ಹೈದರ್ ಮರ್ದಾಳ ತಿಳಿಸಿದ್ದಾರೆ.
ಅವರು ಮಾ.24 ರಂದು ಮನಶರ್ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆಯಲ್ಲಿ ಕಳೆದ 15 ವರ್ಷಗಳಿಂದ ವಿವಿಧ ವಿದ್ಯಾ ಸಂಸ್ಥೆಗಳನ್ನು ಪ್ರಾರಂಭಿಸಿ, ಗ್ರಾಮೀಣ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿರುತ್ತದೆ. ಮನ್ ಶರ್ ಸಂಸ್ಥೆ ಎಲ್.ಕೆ ಜಿ, ಯು.ಕೆ.ಜಿ ಯಿಂದ ಎಸ್.ಎಸ್. ಎಲ್.ಸಿ ಯ ತನಕ ಹಾಗೂ, ಪಿಯು ಕಾಲೇಜು ವಾಣಿಜ್ಯ & ವಿಜ್ಞಾನ ವಿಭಾಗವನ್ನು ಮುನ್ನಡೆಸುತ್ತಿದೆ. ಸತತವಾಗಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ ಹಲವು ಬಾರಿ 100% ಫಲಿತಾಂಶವನ್ನು ಪಡೆದಿರುತ್ತದೆ. 2019ರಿಂದ ಬೆಳ್ತಂಗಡಿ ತಾಲೂಕಿನ ಏಕೈಕ ಪ್ಯಾರಾಮೆಡಿಕಲ್ ಕಾಲೇಜನ್ನು ಸ್ಥಾಪಿಸಿ ಇದೀಗ ರಾಜ್ಯಮಟ್ಟದಲ್ಲೇ ಪ್ರಥಮ, ದ್ವಿತೀಯ, ತೃತೀಯ ಹಾಗೂ ಒಟ್ಟು 6 ರ್‍ಯಾಂಕ್ ಗಳನ್ನು ಪಡೆದು ಬೆಳ್ತಂಗಡಿ ತಾಲೂಕಿಗೆ ಕೀರ್ತಿಯನ್ನು ತಂದಿರುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಆಡಳಿತ ಅಧಿಕಾರಿ ರಶೀದ್ ಕುಪ್ಪೆಟ್ಟಿ, ಉಪಪ್ರಾಂಶುಪಾಲರಾದ ಗೌತಮಿ ಶಂಕರ್, ಉಪನ್ಯಾಸಕರಾದ ವಿಶ್ವನಾಥ, ದಿಶಾಂತ್ ಉಪಸ್ಥಿತರಿದ್ದರು.