ಮಡಂತ್ಯಾರು : ಮಾ.23.ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವತಿಯಿಂದ ಶ್ರೀ ದುರ್ಗಾ ಮಾತೃ ಮಂಡಳಿ ರಚನೆ ಮಾ.23.ರಂದು ದೇವಸ್ಥಾನದ ಅನ್ನ ಛತ್ರದಲ್ಲಿ ನಡೆಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಬಿ.ಅಧ್ಯಕ್ಷತೆ ವಹಿಸಿದ್ದರು.
ದುರ್ಗಾ ಮಾತೃ ಮಂಡಳಿ ಅಧ್ಯಕ್ಷರಾಗಿ ಮಮತ ವಿ.ಆಳ್ವ, ಉಪಾಧ್ಯಕ್ಷರಾಗಿ ಪುಷ್ಪ, ಅಶ್ವಿನಿ, ಸಂಧ್ಯಾ, ಪ್ರಮೀಳಾ, ರಾಜೀವಿ, ಕಾರ್ಯದರ್ಶಿ ಯಾಗಿ ವಿನೋದ ಕೆ, ಜತೆ ಕಾರ್ಯದರ್ಶಿಯಾಗಿ ಸುಮನ, ಸಂಧ್ಯಾ, ಕೋಶಾಧಿಕಾರಿ ಅರುಣಾ ಹಾಗೂ ಕಾರ್ಯಕಾರಿ ಸಮಿತಿಯ 10 ಮಹಿಳಾ ಸದಸ್ಯರ ಆಯ್ಕೆ ನಡೆಯಿತು.
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಘವ ಹೆಚ್, ಮೋಹಿನಿ, ರೀತಾ ಚಂದ್ರಶೇಖರ್, ನೀನಾ ಕುಮಾರ್ ನಾಯ್ಕ, ದೇವಸ್ಥಾನದ ಪ್ರಬಂಧಕ ಗಿರೀಶ್ ಶೆಟ್ಟಿ ಉಪಸ್ಥಿತರಿದ್ದರು.
ಕಳಿಯ, ನ್ಯಾಯತರ್ಪು ಮತ್ತು ಓಡಿಲ್ನಾಳ ಗ್ರಾಮದ ಮಹಿಳಾ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.