ಬೆಳ್ತಂಗಡಿ: ಮಾಲಾಡಿ ಗ್ರಾಮದ ಬಹು ಕಾಲಗಳ ಬೇಡಿಕೆಯ ಊರ್ಲ ರಸ್ತೆ ಕಾಂಕೀಟಿಕರಣಕ್ಕೆ ಒಂದು ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಹತ್ತು ದಿವಸದಲ್ಲಿ ಕಾಮಗಾರಿ ಪ್ರಾರಂಭವಗಾಲಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.

ಅವರು ಮಾ. 24 ರಂದು ಊರ್ಲ ರಸ್ತೆಯನ್ನು ವಿಕ್ಷೀಸಿ ಬಳಿಕ ಪುರಿಯ ಭಜನಾ ಮಂದಿರಕ್ಕೆ ಭೇಟಿ ನೀಡಿದ ಸಂದರ್ಭ ಮಾತನಾಡಿದರು.

ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಮಡಂತ್ಯಾರು ಪ್ಯಾಕ್ಸ್ ಅಧ್ಯಕ್ಷ ಜೋಯಲ್ ಮೆಂಡೊನ್ಸಾ, ನಿರ್ದೇಶಕರಾದ ಸುರೇಶ್ ಎಸ್ ಹಾಗೂ ಮಹಾಬಲ ಪೂಜಾರಿ, ಪ್ರಮುಖರಾದ ದಿನೇಶ್ ಕರ್ಕೇರ ಸೋಣಂದೂರು, ರಾಜೇಶ್ ಕೊಡಿಯೇಲು,ತುಳಸಿ, ಕೃಷ್ಣಪ್ಪ ಪೂಜಾರಿ, ಕರುಣಾಕರ ಹೆಗ್ಡೆ, ಸುಮತಿ ಮೊದಲಾದವರು ಉಪಸ್ಥಿತರಿದ್ದರು ಎಂದು ಮಡಂತ್ಯಾರು ಪ್ಯಾಕ್ಸ್ ಅಧ್ಯಕ್ಷ ಜೋಯಲ್ ಮೆಂಡೊನ್ಸಾ ಸುದ್ದಿ ಉದಯ ಪತ್ರಿಕೆಗೆ ತಿಳಿಸಿದ್ದಾರೆ.