ಪಟ್ರಮೆ: ಇಲ್ಲಿಯ ಮಿತ್ತಡ್ಕದ ನಿವಾಸಿ ಸಂಜೀವ ಗೌಡ ರವರ ಮನೆಗೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಉರಿದ ಘಟನೆ ಮಾ.25 ರಂದು ಸಂಜೆ ನಡೆದಿದೆ.


ಸಂಜೆ ವೇಳೆ ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಗೆ ಬೆಂಕಿ ಹತ್ತಿ ಉರಿದಿದ್ದು ಮನೆ ಸುಟ್ಟುಹೋಗಿದೆ. ಸ್ಥಳೀಯರು ಗಮನಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಮನೆಯ ಪಕ್ಕಾಸು, ಹಂಚು ಸಂಪೂರ್ಣ ಸುಟ್ಟುಹೋಗಿದ್ದು, ಗೃಹೋಪಯೋಗಿ ಸಾಮಾಗ್ರಿಗಳು ಸುಟ್ಟುಹೋಗಿದೆ. ಸುಮಾರು ರೂ. 3 ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಘಟನಾ ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷ ಮನೋಜ್, ಪಿಡಿಒ ಅಮ್ಮಿ ಪೂಜಾರಿ, ಗ್ರಾಮ ಸಹಾಯಕ ಮೋಹನ್ ಆಗಮಿಸಿ ಪರಿಶೀಲಿಸಿದರು.