ಕಕ್ಯಪದವು : ದಿ| ಗಿರಿಜ ಕೋಂಗುಜೆ ಯವರ ಉತ್ತರ ಕ್ರಿಯೆ ಕಕ್ಯಪದವು ಪಂಚದುರ್ಗ ದೇವಿ ಕ್ಷೇತ್ರದಲ್ಲಿ ನಡೆಯಿತು.
ಮುಗ್ಗ ಗುತ್ತು ಕುಟುಂಬಸ್ಥರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಭಗೀರಥ ಗುಂಪೋಳಿ ನುಡಿನಮನ ಸಲ್ಲಿಸಿದರು. ಊರ ಪರವೂರ, ಬಂಧು ಮಿತ್ರರು, ಗಣ್ಯಾತಿಗಣ್ಯರು ಆಗಮಿಸಿ ಮೃತರ ಸದ್ಗತಿಗಾಗಿ ಪ್ರಾರ್ಥಿಸಿದರು. ಬಂದವರಿಗೆ ಮಿತ್ರಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಮಾಜಿ ಸಚಿವರಾದ ಬಿ. ರಮಾನಾಥ ರೈ, ಮಾಜಿ ಶಾಸಕರುಗಳಾದ ಪ್ರಭಾಕರ ಬಂಗೇರ, ಶಕುಂತಲಾ ಶೆಟ್ಟಿ, ರುಕ್ಮಯ ಪೂಜಾರಿ, ಸಂಜೀವ ಮಠಂದೂರು , ದಾ. ಯಶೋಧರ ಪೂಜಾರಿ, ರಮೇಶ ಬಂಗೇರ, ಶಾರದಾ ಕೃಷ್ಣ, ಬಿನುತಾ ಬಂಗೇರ, ಪ್ರಿತಿತಾ ಬಂಗೇರ, ಹೇಮನಾಥಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ, ಎಂ. ವಿಶ್ವನಾಥ ರೈ, ಶಿವರಾಮ ಆಳ್ವ, ಮೋನಪ್ಪ ಪೂಜಾರಿ ಕಂಡೆತ್ಯಾರ್, ಕೂಸಪ್ಪ ಮಾಸ್ತರ್, ಅನಂದ ಪೂಜಾರಿ ಸರ್ವೆ ದೋಲ, ಪದ್ಮನಾಭ . ಎಂ. ಪಾದೆ. ಗಂಗಾಧರ ಪೂಜಾರಿ ಪಾದೆ, ಹರಿಕೃಷ್ಣ ಬಂಟ್ವಾಳ, ಪದ್ಮಶೇಖರ ಜೈನ್, ಬಾಲಕೃಷ್ಣ ಅಂಚನ್, ಪೀತಾಂಬರ ಹೇರಾಜೆ, ಹರೀಶ್ ಕುಮಾರ್ ನಡಕ್ಕರ, ಯೋಗೀಶ್ ಕುಮಾರ್ ನಡಕ್ಕರ, ಡಾ.ಸತ್ಯಶಂಕರ್ ಶೆಟ್ಟಿ , ಚೆನ್ನಪ್ಪ ಸಾಲ್ಯಾನ್, ದಾಮೋದರ ನಾಯಕ್, ಸಂಜೀವ ಪೂಜಾರಿ ಕೇರ್ಯ, ಗಣೇಶ ಕೋಂಗುಜೆ ಮುಂತಾದ ಹಲವರು ಭಾಗವಹಿಸಿದ್ದರು.
ಮೃತರ ಮಕ್ಕಳಾದ ಡಾ.ರಾಜಾರಾಮ್. ಕೆ. ಬಿ, ಜಯರಾಮ. ಕೆ. ಬಿ, ಸುಜಯಾ. ಕೆ. ಬಿ, ವಿಜಯಾ. ಕೆ. ಬಿ, ಸೊಸೆಯಂದಿರು ದಾ. ರಮ್ಯಾ ರಾಜಾರಾಮ್, ಸೌಮ್ಯ ಜಯರಾಮ್, ಅಳಿಯಂದಿರಾದ ಸದಾನಂದ, ವಾಸುದೇವ ಮೊಮ್ಮಕ್ಕಳು ಮತ್ತು ಕುಟುಂಬಸ್ತರು ಉಪಸ್ಥಿತರಿದ್ದು ಆಹ್ವಾನಿತರನ್ನು ಸತ್ಕರಿಸಿದರು.