37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಪುಂಜಾಲಕಟ್ಟೆ ಸ.ಪ್ರ.ದ. ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಹಿಳೆಯರ ಹ್ಯಾಂಡ್ ಬಾಲ್ ಪಂದ್ಯಾಟ

ಪುಂಜಾಲಕಟ್ಟೆ : ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಹಿಳೆಯರ ಹ್ಯಾಂಡ್ ಬಾಲ್ ಪಂದ್ಯಾಟ  ಆಯೋಜಿಸಲಾಗಿತ್ತು.

 ಕಾರ್ಯಕ್ರಮದ ಉದ್ಘಾಟನೆಯನ್ನು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಪದವಿ ಕಾಲೇಜು ಪ್ರಾಂಶುಪಾಲರು ಪ್ರೊ. ಅಲೆಕ್ಸ್ ಐವನ್ ಸಿಕ್ವೇರಾ, ನೆರವೇರಿಸಿ ಕ್ರೀಡೆ ಎಲ್ಲರ ಮನ ಬೆಳಗುವುದು ಮತ್ತು ಬದುಕಿನಲ್ಲಿ ಸ್ಪೂರ್ತಿ ನೀಡುತ್ತದೆ. ಕ್ರೀಡೆಯ ಬಗೆಗಿನ ನನ್ನ ಒಲವು ಹಲವು ವರ್ಷಗಳಿಂದ ಮುಂದುವರೆಯುತ್ತಿದೆ. ಹ್ಯಾಂಡ್ ಬಾಲ್ ಕ್ರೀಡೆಯೂ ಸಹ ಅತ್ಯಂತ ಆಕರ್ಷಣೀಯ ಕ್ರೀಡೆ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಾಧವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

ಮುಖ್ಯ ಅತಿಥಿಗಳಾಗಿ ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ವಿಪುಲ್, ಮಂಗಳೂರು ವಿಶ್ವವಿದ್ಯಾನಿಲಯದ ಪ್ರತಿನಿಧಿ ಡಾ. ಪ್ರಕಾಶ್ ಡಿ’ಸೋಜಾ ಕ್ರೀಡಾಕೂಟ ವೀಕ್ಷಕ ರಾಗಿ  ಆಗಮಿಸಿದ್ದರು. ಕನ್ನಡ ವಿಭಾಗದ ಉಪನ್ಯಾಸಕಿ ಶ್ರೀಮತಿ ಗಾಯತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ವಿದ್ಯಾ ಸ್ವಾಗತಿಸಿದರು, ಪ್ರೊ. ಸಂತೋಷ್ ಪ್ರಭು ವಂದಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಶೈಲೇಶ್ ಕುಮಾರ್ ಡಿ ಹೆಚ್. ಕ್ರೀಡಾಕೂಟದ ಸಂಚಾಲಕರಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಿ ಮಾತನಾಡಿದ ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಪ್ರೊ. ಸುರೇಶ್ ವಿ.ಇವರು ಕ್ರೀಡಾಕೂಟದ ಆಯೋಜನೆ ಬಹಳ ಶ್ರಮದಾಯಕ,  ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಆಗ ಆಯೋಜಕರ ಶ್ರಮ ವ್ಯರ್ಥವಾಗದು ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಮಾಧವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಸರಕಾರಿ ಪ್ರಥಮ ಕಾಲೇಜು ಪುಂಜಾಲಕಟ್ಟೆ ಇಲ್ಲಿಯ ಹಿರಿಯ ವಿದ್ಯಾರ್ಥಿಗಳಾದ ಶ್ರೀಮತಿ ರಂಜಿತ, ಉಪನ್ಯಾಸಕಿ, ರಾಹುಲ್, ಉದ್ಯಮಿ, ಸಂಘದ ಖಜಾಂಚಿ ಜಿತೇಶ್ ಕೆ. ವಕೀಲರು ಬೆಳ್ತಂಗಡಿ   ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ರೇಖಾ ಯು.ಎನ್. ಕಾರ್ಯಕ್ರಮವನ್ನು ನಿರೂಪಿಸಿದರು. ವಾಣಿಜ್ಯ ವಿಭಾಗದ ಶ್ರೀಮತಿ ಸೌಮ್ಯ ಸ್ವಾಗತಿಸಿದರು. ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಶೈಲೇಶ್ ಕುಮಾರ್ ಡಿ ಹೆಚ್. ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.

ಸ್ಪರ್ಧೆಯಲ್ಲಿ ಎಸ್ ಡಿ ಎಂ ಕಾಲೇಜು ಉಜಿರೆ ಪ್ರಥಮ, ಆಳ್ವಾಸ್ ಕಾಲೇಜ್ ಮೂಡಬಿದ್ರೆ ದ್ವಿತೀಯ, ಎಂಪಿಎಂ ಕಾಲೇಜು ಕಾರ್ಕಳ ತೃತೀಯ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ತಂಡ ಚತುರ್ಥ ಸ್ಥಾನಗಳಿಸಿತು.

Related posts

ವೇಣೂರು; ಪಡ್ಡಂದಡ್ಕ ಮಸೀದಿಯಲ್ಲಿ ಸಂಭ್ರಮದ ಈದ್ ದಿನಾಚರಣೆ

Suddi Udaya

ಎಸ್.ಐ.ಟಿ ತನಿಖೆಯ ತಡೆಯಾಜ್ಞೆ ತೆರವು ಮಾಡಿದ ಹೈಕೋರ್ಟ್

Suddi Udaya

ಬಳಂಜ ಜ್ಯೋತಿ ಮಹಿಳಾ ಮಂಡಲದ ಪದಾಧಿಕಾರಿಗಳ ಆಯ್ಕೆ ಸಭೆ: ಅಧ್ಯಕ್ಷರಾಗಿ ಚೇತನಾ ಜೈನ್, ಪ್ರ.ಕಾರ್ಯದರ್ಶಿಯಾಗಿ ಯಕ್ಷಿತಾ ದೇವಾಡಿಗ

Suddi Udaya

ದೊಂಡೋಲೆ ನಾರ್ಯ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಸತೀಶ್, ಕಾರ್ಯದರ್ಶಿ ದಿವಾಕರ್

Suddi Udaya

ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ: ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಪರಿವಾರ ದೈವಗಳ ಸಿರಿಸಿಂಗಾರ ನರ್ತನ ಸೇವೆ

Suddi Udaya

ಕುಂಡದಬೆಟ್ಟು ಉರೂಸ್ ಗೆ ಸಮಾಪ್ತಿ

Suddi Udaya
error: Content is protected !!