ಉಜಿರೆ : ಗ್ರಾಮ ಪಂಚಾಯತ್ ಉಜಿರೆ ಇದರ ಸಭಾಂಗಣದಲ್ಲಿ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ ಉಜಿರೆ, ಗ್ರಾಮ ಪಂಚಾಯತ್ ಉಜಿರೆ, ಮತ್ತು ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ ಇದರ ಸಹಯೋಗದಲ್ಲಿ ಪ್ರೇರಣಾ ಮಹಿಳಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿನುತ ರಜತ್ ಗೌಡ ಇವರ ಅಧ್ಯಕ್ಷತೆಯಲ್ಲಿ ಕೃಷಿ ಮಾಹಿತಿ ಕಾರ್ಯಕ್ರಮ ನಡೆಯಿತು.
ಅಣಬೆ ಕೃಷಿ ಬಗ್ಗೆ ಸಂಪನ್ಮೂಲ ವ್ಯಕ್ತಿಯಾದ ಸುಲೈಮಾನ್ ಬೆಳಾಲು ಮತ್ತು ಅಡಿಕೆ ಕೃಷಿ ನಿರ್ವಹಣೆ, ನೀರಿನ ಸದ್ಭಳಕೆ ಮತ್ತು ರೋಗ ಹತೋಟಿ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಉಪಸ್ಥಿತರಿದ್ದು ಸಂಜೀವಿನಿ ಒಕ್ಕೂಟದ ಈ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಗಣೇಶ್, ಪ್ರಭಾಕರ ಮಯ್ಯ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೃಷಿ ಸಖಿ ಭಾಗಿರಥಿ ಸ್ವಾಗತಿಸಿ ಅಚ್ಚು ಕಟ್ಟಾಗಿ ಕಾರ್ಯಕ್ರಮ ಸಂಯೋಜಿಸಿದರು. ಒಕ್ಕೂಟದ ಕಾರ್ಯ ದರ್ಶಿ ದೀಪ , ಸುಜಾತ, ಎಲ್.ಸಿ ಆರ್ ಪಿ ಚಿತ್ರ, ಪಶು ಸಖಿ ಏಕಲತ ಸಹಕರಿಸಿದರು. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದ ಕೃಷಿಕರು ಮತ್ತು ಮಹಿಳೆಯರು ತರಬೇತಿಯ ಪ್ರಯೋಜನವನ್ನು ಪಡೆದುಕೊಂಡರು. ಅಧ್ಯಕ್ಷ ವಿನುತ ರಜತ್ ಗೌಡ ಧನ್ಯವಾದ ಸಮರ್ಪಿಸಿದರು.