ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಹಾಗೂ ವಾಣಿ ವಿದ್ಯಾ ಸಂಸ್ಥೆಗಳ ನೂತನ ಕಟ್ಟಡ ಹಾಗೂ ಸಭಾಭವನದ ಲೋಕಾರ್ಪಣಾ ಸಮಾರಂಭವು ಎ.20 ರಂದು ಬೆಳ್ತಂಗಡಿ ಹಳೆಕೋಟೆ ವಾಣಿ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಮಾ.29 ರಂದು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕುಶಾಲಪ್ಪ ಗೌಡ, ಗೌರವಾಧ್ಯಕ್ಷ ಪದ್ಮ ಗೌಡ, ಕಾರ್ಯದರ್ಶಿ ಗಣೇಶ್ ಗೌಡ, ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ಕೋಶಾಧಿಕಾರಿ ಯುವರಾಜ್ ಅನಾರು, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ ಸವಣಾಲು, ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆ ಎಂ, ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ, ನಿರ್ದೇಶಕರಾದ ಜಯಾನಂದ ಗೌಡ, ಬಾಲಕೃಷ್ಣ ಗೌಡ ಬಿರ್ಮೊಟ್ಟು, ಪ್ರಸನ್ನ ಬಾರ್ಯ, ಮಾಧವ ಗೌಡ, ದಿನೇಶ್ ಕೊಯ್ಯೂರು, ವಿಜಯ ಗೌಡ ಕಳಾಯಿತೊಟ್ಟು, ವಸಂತ ಗೌಡ ನಡ, ಉಷಾ ದೇವಿ, ಭವಾನಿ ಕಾಂತಪ್ಪಗೌಡ, ಡಿ.ಎಂ ಗೌಡ, ಸುನಿಲ್ ಅನಾವು ಉಪಸ್ಥಿತರಿದ್ದರು.