ಮಚ್ಚಿನ: ಬಳ್ಳಮಂಜ, ಮಚ್ಚಿನ ಮತ್ತು ಪಾರೆಂಕಿ ಗ್ರಾಮದ ಮಾರಿಗುಡಿ ವರೆಗೆ ಹೊಸ ಫೀಡರ್ ಕಲ್ಲೇರಿ ವಿದ್ಯುತ್ ಸರ್ವಿಸ್ ಸ್ಟೇಷನ್ ನಿoದ ಮಾ.28 ರಂದು ಚಾಲನೆ ನೀಡಲಾಯಿತು.

ಮಚ್ಚಿನ ಗ್ರಾಮ ವ್ಯಾಪ್ತಿಯ ಕಾರಂದೂರು ಫೀಡರ್ ನಿಂದ ಬೆರ್ಬಾಲಾಜೆ ಪಾಲಡ್ಕ ಬಳ್ಳಮಂಜ ದೇವರಗುಂಡಿ ಕುತ್ತಿನ ಬಂಗೇರಕಟ್ಟೆ ಮತ್ತು ಪಾರೆಂಕಿ ಗ್ರಾಮದ ವ್ಯಾಪ್ತಿಯ ಅಮ್ಡಾಲ್ ನೆತ್ತರ ಸಾಲ್ಮರ ಮತ್ತು ಮಾರಿಗುಡಿ ಯವರೆಗೆ ಸoಪರ್ಕ ನೀಡಲಾಗಿದೆ.
ಈ ಸಂದರ್ಭದಲ್ಲಿ ಕಲ್ಲೇರಿ ಕೆ ಪಿ ಟಿ ಸಿ ಎಲ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವಿನಾಶ್. ಮಡಂತ್ಯಾರು ಮೆಸ್ಕಾಂ ಶಾಖಾಧಿಕಾರಿ ಸಂತೋಷ್ ನಾಯ್ಕ್, ಕಕ್ಕೆಪದವು ಮೆಸ್ಕಾಂ ಶಾಖಾಧಿಕಾರಿ ಮನೋಜ್ ಮತ್ತು ಮಡಂತ್ಯಾರು ಶಾಖೆಯ ಪವರ್ ಮ್ಯಾನ್ ಗಳು ಉಪಸ್ಥಿತರಿದ್ದರು.