September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಣ, ಸಂಶೋಧನೆ, ಮತ್ತು ಉದ್ಯಮಶೀಲತೆ ಕಾರ್ಯಾಗಾರ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಣ, ಸಂಶೋಧನೆ, ಮತ್ತು ಉದ್ಯಮಶೀಲತೆ ಎಂಬ ವಿಷಯ ಕುರಿತು ಇತ್ತೀಚೆಗೆ ಅಂತರ್ ಕಾಲೇಜು ಕಾರ್ಯಗಾರ ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರೊ. ರವಿ, ನಿರ್ದೇಶಕರು ಎನ್‌ಐಟಿಕೆ ಸುರತ್ಕಲ್, ರವರು ಮಾತನಾಡುತ್ತಾ ‘ಶಿಕ್ಷಕರು ಅದ್ಯಾಪನದೊಂದಿಗೆ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ಬೋಧನಾ ಸಾಮರ್ಥ್ಯ ಹೆಚ್ಚಾಗುವುದು ಎಂದರು ಹಾಗೂ ಉತ್ತಮ ಸಂಶೋಧನಾ ಪ್ರಸ್ತಾವನೆಗಳನ್ನು ವಿವಿಧ ಅನುದಾನ ನೀಡುವ ಸಂಸ್ಥೆಗಳಿಗೆ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಡಾ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮ ಸಂಯೋಜಕರಾದ ಡಾ. ಸುಬ್ರಹ್ಮಣ್ಯ ತೋಳ್ಪಾಡಿತ್ತಾಯ ಸ್ವಾಗತಿಸಿ, ವಂದಿಸಿದರು. ಎಸ್‌ಡಿಯಂ ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕರು ಭಾಗವಹಿಸಿದರು.

Related posts

ತಾಲೂಕು ಮಟ್ಟದ ಕರಾಟೆ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿನಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ನಿಡ್ಲೆ : ಮರ ಕಡಿಯುವ ವೇಳೆ ಆಕಸ್ಮಿಕವಾಗಿ ಮರ ಬಿದ್ದು ವ್ಯಕ್ತಿ ಸಾವು

Suddi Udaya

ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್ ಪ್ರಭು ರಿಗೆ ಯೂನಿಯನ್ ವತಿಯಿಂದ ಬೀಳ್ಕೊಡುಗೆ ಸಮಾರಂಭ

Suddi Udaya

ಆರಂಬೋಡಿ ಗ್ರಾಮ‌ ಪಂಚಾಯತ್ 2024-25ನೇ ಸಾಲಿನ ಪ್ರಥಮ‌ ಸುತ್ತಿನ ಗ್ರಾಮ ಸಭೆ

Suddi Udaya

ಧರ್ಮಸ್ಥಳ ಮಂಜುಷಾ ವಸ್ತು ಸಂಗ್ರಹಾಲಯದಲ್ಲಿ ಶತಮಾನದ ಅದ್ಭುತ ದಂತದ ಶಿಲ್ಪಕಲೆ ಮತ್ತು ಕಲಾಕೃತಿಗಳ ಗ್ಯಾಲರಿಯ ಉದ್ಘಾಟನೆ

Suddi Udaya

ಬೆಳ್ತಂಗಡಿ: ಪ್ರಭಾರ ಶಿಕ್ಷಣಾಧಿಕಾರಿ ಕಾರಿನ ಮೇಲೆ ಮರ ಬಿದ್ದು ಹಾನಿ

Suddi Udaya
error: Content is protected !!