September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಧರ್ಮಸ್ಥಳ ಹಾಗೂ ಶಿಶಿಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದಿನೇಶ್ ಎಂ. ಸೇವಾ ನಿವೃತ್ತಿ

ಧರ್ಮಸ್ಥಳ ಗ್ರಾಮ ಪಂಚಾಯತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ದಿನೇಶ್ ಎಂ ಇವರು 31 ವರ್ಷಗಳ ಸೇವೆ ಸಲ್ಲಿಸಿ ಸೆ.30 ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.


ಊರಿನ ಶಾಲೆಯಲ್ಲಿ ಗೌರವ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಇವರು 1990 ರಲ್ಲಿ ಮುಂದುವರಿಕಾ ಧರ್ಮಸ್ಥಳ ಶಿಕ್ಷಣ ಕೇಂದ್ರದ ಪ್ರೇರಕರಾಗಿ ಕೆಲಸವನ್ನು ಮಾಡಿದ್ದು 1994ರಿಂದ ಧರ್ಮಸ್ಥಳ ಗ್ರಾಮ ಪಂಚಾಯತಿಯಲ್ಲಿ ಬಿಲ್ ಕಲೆಕ್ಟರ್ ,ಕ್ಲರ್ಕ್ ಕೆಲಸವನ್ನು ನಿರ್ವಹಿಸಿ 2012 ಮುಂಬಡ್ತಿ ಹೊಂದಿ ಗ್ರಾಮ ಪಂಚಾಯತಿ ಲೆಕ್ಕ ಸಹಾಯಕರಾಗಿ ಹಾಗೂ 2020ರಲ್ಲಿ ಗ್ರೇಡ್ -1 ಕಾರ್ಯದರ್ಶಿಯಾಗಿ ಪುತ್ತೂರು ತಾಲೂಕಿನ ಕಬಕ ಹಾಗೂ ಉಪ್ಪಿನಂಗಡಿಯಲ್ಲಿ ಸೇವೆ ಸಲ್ಲಿಸಿದರು.

2023 ರಿಂದ ಧರ್ಮಸ್ಥಳ ಗ್ರೇಡ್ -1 ಕಾರ್ಯದರ್ಶಿಯಾಗಿ, 2024 ರಿಂದ ಧರ್ಮಸ್ಥಳ ಹಾಗೂ ಶಿಶಿಲ ಗ್ರಾಮ ಪಂಚಾಯತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 2023 ರಿಂದ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ 2ವರ್ಷ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.


ಇವರು ನಿಡ್ಲೆ ಗ್ರಾಮದ ಮಜಲಿ ಮಾರು ದೇವಣ್ಣ ಗೌಡ ಮತ್ತು ತೇಜಮ್ಮ ಇವರ ಪುತ್ರರಾಗಿದ್ದು ಪ್ರಗತಿಪರ ಕೃಷಿಕರು ಕೂಡಾ ಆಗಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ನಿಡ್ಲೆಯಲ್ಲಿ ಪೂರೈಸಿದ ಇವರು ಉಜಿರೆ ಶ್ರೀ ಮಂಜುನಾಥೇಶ್ವರ ಕಾಲೇಜಿನಲ್ಲಿ ಪದವಿಯನ್ನು ಪಡೆದಿರುತ್ತಾರೆ. ಯಕ್ಷಗಾನ ಹಾಗೂ ನಾಟಕದ ಹವ್ಯಾಸವನ್ನು ಹೊಂದಿರುವ ಇವರು ಹಾಸ್ಯ ಕಲಾವಿದರಾಗಿದ್ದಾರೆ. ಇವರ ನಿವೃತ್ತಿ ಜೀವನ ಸುಖಮಯವಾಗಿರಲೆಂದು ಧರ್ಮಸ್ಥಳ, ಶಿಶಿಲ, ಉಪ್ಪಿನಂಗಡಿ, ಕಬಕ ಗ್ರಾಮಸ್ಥರು ಶುಭ ಹಾರೈಸಿದ್ದಾರೆ.

Related posts

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ: ದೇವರ ದರ್ಶನ ಬಲಿ, ಪಲ್ಲ ಪೂಜೆ

Suddi Udaya

ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನ: ನಾವೂರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ಅದ್ಭುತ ಸಾಧನೆ

Suddi Udaya

ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Suddi Udaya

ಅರಣ್ಯ ಹಕ್ಕು ಕಾಯ್ದೆಯ ಸೆಕ್ಷನ್ 3 (2) ಅಡಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಶಾಸಕ ಹರೀಶ್ ಪೂಂಜರಿಂದ ಪ.ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕನಗವಲ್ಲಿ ರವರಿಗೆ ಮನವಿ

Suddi Udaya

ಇಚಿಲಂಪಾಡಿ ಬೆಕ್ಕಿನ ಮರಿಯನ್ನು ನುಂಗಿದ ನಾಗರಹಾವು: ಹಾವನ್ನು ಹಿಡಿದು ಕಾಡಿಗೆ ಬಿಟ್ಟ ಧರ್ಮಸ್ಥಳದ ಸ್ನೇಕ್ ಪ್ರಕಾಶ್

Suddi Udaya

ಕನ್ಯಾಡಿ-1 ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya
error: Content is protected !!