
ವೇಣೂರು: 32ನೇ ವರ್ಷದ ವೇಣೂರು ಪೆರ್ಮುಡ ಸೂರ್ಯ -ಚಂದ್ರ ಜೋಡುಕರೆ ಕಂಬಳಕೂಟವನ್ನು ಗಣೇಶ್ ನಾರಾಯಣ ಪಂಡಿತ ರವರು ಮಾ.30ರಂದು ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷ ರಕ್ಷಿತ್ ಶಿವರಾಂ, ಅಧ್ಯಕ್ಷ ನಿತೀಶ್ ಕೋಟ್ಯಾನ್, ಕಾರ್ಯಾಧ್ಯಕ್ಷ ಶೇಖರ್ ಕುಕ್ಕೇಡಿ, ನಾಗೇಶ್ ಕುಮಾರ್ ಗೌಡ, ಪದ್ಮಾಂಭ ಕ್ಯಾಟರಸ್ ನ ಮಾಲಕ ನಾಗಕುಮಾರ್ ಜೈನ್, ಹಾಗೂ ಕಂಬಳ ಸಮಿತಿಯ ಪದಾಧಿಕಾರಿಗಳು ಅಭಿಮಾನಿಗಳು, ಊರವರು ಉಪಸ್ಥಿತರಿದ್ದರು.