ನಡ: ಉಮರುಲ್ ಫಾರೂಕ್ ಜುಮಾ ಮಸ್ಜಿದ್ ಮತ್ತು ಸಿರಾಜುಲ್ ಹುದಾ ಮದರಸ ಕೇಳ್ತಾಜೆಯಲ್ಲಿ ಈದುಲ್ ಫಿತರ್ ಆಚರಿಸಲಾಯಿತು.
ಮುಸ್ಲಿಮರು ದಿನಗಳ ವ್ರತ ಆಚರಿಸಿ ಇಂದು ಶಾಂತಿ ಸೌಹಾರ್ಧದ ಸಂಕೇತವಾದ ಈದುಲ್ ಫಿತರ್ ಹಬ್ಬವನ್ನು ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ಸಾಮೂಹಿಕ ನಮಾಝ್, ಖುತುಬಾ ಖತೀಬರಾದ ಅಬೂಸಾಲಿ ಝೈನಿ ನೆರವೇರಿಸಿದರು. ಬಳಿಕ ಸ್ನೇಹದ ಸಂಕೇತವಾಗಿ ಪರಸ್ಪರ ಶುಭಾಶಯವನ್ನು ಹಂಚಿಕೊಳ್ಳಲಾಯಿತು. ಊರ ಹಿರಿಯರು, ಯುವಕರು ಮತ್ತು ಮಕ್ಕಳು ಹೊಸ ಉಡುಪು ಧರಿಸಿ ಮಸೀದಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದರು.