September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗುರುವಾಯನಕೆರೆ ಸ.ಹಿ.ಪ್ರಾ. ಶಾಲೆಯಲ್ಲಿ ಎಲ್ ಕೆ ಜಿ ಮತ್ತು ಯುಕೆಜಿ ಮಕ್ಕಳ ರೆಡ್ ಕಲರ್ ಸಂಭ್ರಮ

ಗುರುವಾಯನಕೆರೆ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುರುವಾಯನಕೆರೆ ಎಲ್ ಕೆ ಜಿ ಮತ್ತು ಯುಕೆಜಿ ಮಕ್ಕಳ ರೆಡ್ ಕಲರ್ ಸೆಲೆಬ್ರೇಶನ್ ನಡೆಯಿತು.

ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಅಧ್ಯಕ್ಷತೆ ವಹಿಸಿದರು. ಎಲ್ ಕೆ ಜಿ ಪೋಷಕರಾದ ಮಹಮ್ಮದ್ ಸಾದಿಕ್, ಜಾನ್ಸನ್ ಮೆಲ್ವಿನ್ ಪಿರೇರಾ , ಕಿರಣ್ ಭಟ್ ಹಾಗೂ ಎಸ್.ಡಿ.ಎಮ್.ಸಿ ಸದಸ್ಯರಾದ ಅಬ್ದುಲ್ ರಹಿಮಾನ್ ಮಹಮ್ಮದ್ ಹನೀಫ್, ಹಾಗೂ ಎಲ್ ಕೆ ಜಿ ಮತ್ತು ಯುಕೆಜಿಯ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಉಮಾ. ಎನ್ ಶಾಲಾ ಮಾಹಿತಿಯನ್ನು ನೀಡಿದರು. ಯುಕೆಜಿ ಶಿಕ್ಷಕಿ ಶೀಭಾ ಮೆರ್ಲಿನ್ ಸ್ವಾಗತಿಸಿದರು. ಆಯಾ ಶ್ವೇತ ಮಕ್ಕಳನ್ನು ತಯಾರುಗೊಳಿಸಿದರು. ಮಕ್ಕಳಿಂದ ಹಾಡು ಅಭಿನಯ ಗೀತೆಯನ್ನು ಮಾಡಲಾಯಿತು. ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಪೋಷಕರಿಗೆ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ರೆಡ್ ಕಲರ್ ವಸ್ತುಗಳನ್ನು ಪೋಷಕರು ತಂದು ನೀಡಿದರು. ಎಸ್ ಡಿ ಎಂ ಸಿ ಅಧ್ಯಕ್ಷರು ಒಂದು ತರಗತಿ ಕೊಠಡಿ ನಿರ್ಮಾಣ ಮಾಡಲು ಎಲ್ಲಾ ದಾನಿಗಳ ಸಹಕಾರವನ್ನು ಕೋರಿದರು. ಮುಖ್ಯ ಶಿಕ್ಷಕಿ ಉಮಾ. ‍ಎನ್ ಧನ್ಯವಾದವಿತ್ತರು.

Related posts

ವೇಣೂರು ಠಾಣಾ ಪೊಲೀಸ್ ಉಪ ನಿರೀಕ್ಷಕರಾಗಿ ಶ್ರೀಶೈಲ ಡಿ. ಮುರುಗೋಡು

Suddi Udaya

ಬೆಳ್ತಂಗಡಿಯಲ್ಲಿ ಬಸ್ ದರ ಹೆಚ್ಚಳ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ

Suddi Udaya

ಸೆ.17: ದೈವ ಕ್ಷೇತ್ರ ಬಡೆಕ್ಕಾವಿನಲ್ಲಿ ಉಚಿತ ಕಣ್ಣಿನ ಪರೀಕ್ಷೆ ಹಾಗೂ ಕನ್ನಡಕ ವಿತರಣೆ

Suddi Udaya

ಮಿತ್ತಬಾಗಿಲು: ಕೊಳಂಬೆ ನಿವಾಸಿ ವಿದ್ಯಾ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬಳ್ಳಮಂಜ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ನ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ತಾಲೂಕು ಆಡಳಿತ ಸೌಧದಲ್ಲಿ ಮಹಾವೀರ ಜಯಂತಿ ಆಚರಣೆ

Suddi Udaya
error: Content is protected !!