ಬೆಳ್ತಂಗಡಿ: ದಕ್ಷಿಣದ ಅಯೋಧ್ಯೆಯೆಂದೇ ಪ್ರಸಿದ್ಧಿ ಪಡೆದಿರುವ ಶ್ರೀರಾಮ ಕ್ಷೇತ್ರ ಕನ್ಯಾಡಿಯಲ್ಲಿ ನಡೆಯುತ್ತಿರುವ 65 ನೇ ವರ್ಷದ ಶ್ರೀರಾಮ ನಾಮ ಸಪ್ತಾಹದಲ್ಲಿ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ವತಿಯಿಂದ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ಸಹಕಾರದೊಂದಿಗೆ ಭಾಗವಹಿಸಿ ಎರಡು ಗಂಟೆ ಭಜನಾ ಸೇವೆ ಸಲ್ಲಿಸಲಾಯಿತು. ಬಳಿಕ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು.

ಈ ಸಂದರ್ಭದಲ್ಲಿ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ, ಸಂಘದ ಮಾಜಿ ಕಾರ್ಯದರ್ಶಿ ಸದಾನಂದ ಪಿ ಸಾಲಿಯಾನ್, ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿ ಸಂಚಾಲಕ ಹರೀಶ್ ವೈ ಚಂದ್ರಮ,ಸೂಳಬೆಟ್ಟು ಭಜನಾ ತಂಡದ ಮುಖ್ಯಸ್ಥ ಪ್ರಮೋದ್ ಪೂಜಾರಿ, ಭಜನಾ ತರಬೇತುದಾರೆ ಮಾನ್ಯ ಹಾಗೂ ಭಜನಾ ವಿದ್ಯಾರ್ಥಿಗಳು ಭಾಗಿಯಾದರು.