
ಮುಂಡಾಜೆ: ಮುಂಡಾಜೆ ಗ್ರಾಮ ವ್ಯಾಪ್ತಿಯ ಕೊಟ್ರೊಟ್ಟು ಬಳಿ ಖಾಸಗಿ ಜಮೀನಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ನಂದಿಸಲು ಅಗ್ನಿಶಾಮಕ ವಾಹನ ಇಲ್ಲದೆ ಪರದಾಡುವಂತೆ ಆಗಿದೆ.

ಘಟನೆ ನಡೆದ ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಬೆಂಕಿ ಆರಿಸಲು ಕಾಮಗಾರಿಯ ನೀರಿನ ಟ್ಯಾಂಕರ್ ನೆರವಾಗಿದೆ. ಬೇಸಿಗೆಗಾಲದಲ್ಲಿ ಅಗತ್ಯವಾಗಿ ಇರಬೇಕಾದ ಅಗ್ನಿಶಾಮಕ ವಾಹನ ತಾಲೂಕಿನಲ್ಲಿ ಇಲ್ಲದೇ ಇರುವುದು ವಿಪರ್ಯಾಸ. ಈ ಬಗ್ಗೆ ಒಂದು ತಿಂಗಳು ಕಳೆದರು ಸಂಬಂಧಪಟ್ಟ ಇಲಾಖೆ ಹಾಗೂ ಸರಕಾರ ಎಚ್ಚೆತ್ತುಕೊಳ್ಳದೆ ಇರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.