
ಆರಂಬೋಡಿ: ನಿನ್ನೆ ಸುರಿಧ ಗಾಳಿ ಮಳೆಗೆ ಕೋಳಿ ಸಾಕಾಣಿಕೆಯ ಶೆಡ್ಡೊಂದು ಕುಸಿದು ಬಿದ್ದು ಸಾವಿರಾರು ಕೋಳಿಗಳು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಆರಂಭೋಡಿ ಗ್ರಾಮದ ಹಕ್ಕೇರಿ ನಡುಮನೆ ಎಂಬಲ್ಲಿ ನಡೆದಿದೆ.

ಆರಂಬೋಡಿ ಗ್ರಾಮ ಪಂಚಾಯತ್ ಸದಸ್ಯ,ಹಕ್ಕೇರಿ ನಡುಮನೆ ನಿವಾಸಿ ಸುದರ್ಶನ್ ಅವರ ಮಾಲಕತ್ವದ ಶೆಡ್‌ನಲ್ಲಿ ಸುಮಾರು 3000 ಕ್ಕೂ ಹೆಚ್ಚು ಕೋಳಿಗಳನ್ನು ಸಾಕಲಾಗುತ್ತಿತ್ತು.ಸುಮಾರು 41 ದಿನಗಳ ಕೊಳಿಗಳು ಶೆಡ್ ನಲ್ಲಿದ್ದು ಸಾವಿರಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿವೆ.ಈ ಘಟನೆಯಿಂದ ರೂ 6.00 ಲಕ್ಷದವರೆಗೂ ನಷ್ಟವಾಗಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು,ಸ್ಥಳೀಯ ಪಂಚಾಯತ್ ಆಡಳಿತ ಮಂಡಳಿ ಸದಸ್ಯರು ಆಗಮಿಸಿ ಪರೀಶೀಲಿಸಿದರು.