22.8 C
ಪುತ್ತೂರು, ಬೆಳ್ತಂಗಡಿ
April 4, 2025
Uncategorized

ಪದ್ಮುಂಜ ಶಾಲೆಯಲ್ಲಿ ಪರೀಕ್ಷೆಗೆ ಅವಕಾಶ ನೀಡಿಲ್ಲ ಎಂಬ ಆರೋಪ: ಪರೀಕ್ಷೆಗೆ ಹಾಜರಾದ ಇಬ್ಬರೂ ವಿದ್ಯಾರ್ಥಿಗಳು

ಪದ್ಮುಂಜ: ಪದ್ಮುಂಜ ಸರಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಿಂದ ಇಬ್ಬರು ವಿದ್ಯಾರ್ಥಿನಿಯರಿಗೆ ಕಲಿಕೆಯಲ್ಲಿ ಹಿಂದುಳಿದಿದ್ದಾರೆಂಬ ಕಾರಣಕ್ಕೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದ್ದ ಪ್ರಸಂಗ ಬಗೆಹರಿದಿದ್ದು, ಇಬ್ಬರೂ ಎ.2 ರಂದು ಪರೀಕ್ಷೆ ಬರೆದಿದ್ದಾರೆ.

ಶೇ. ನೂರು ಫಲಿತಂಶದ ಕಾರಣಕ್ಕೆ ಕಲಿಕೆಯಲ್ಲಿ ಹಿಂದುಳಿದಿರುವ ತಮಗೆ ಅವಕಾಶ ನಿರಾಕರಿಸಲಾಗಿದೆ ಎಂದು ದೂರು ನೀಡಿರುವ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಇಬ್ಬರಿಗೂ ಪ್ರವೇಶ ಪತ್ರ ನೀಡಿದ್ದರು. ಆ ಬಳಿಕವೂ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದರು. ಅವರ ಮನವೊಲಿಸಿದ ಪರಿಣಾಮ ಕರಾಯ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ವಿಜ್ಞಾನ ಪರೀಕ್ಷೆಯನ್ನು ಬರೆದರು. ಉಳಿದ ಒಂದು ಪರೀಕ್ಷೆಯನ್ನು ಬರೆದರೆ, ಉಳಿದ ನಾಲ್ಕು ಪರೀಕ್ಷೆಗಳನ್ನು ಮುಂದಿನ 2 ಹಂತಗಳಲ್ಲಿ ಬರೆಯಬಹುದಾಗಿದೆ.

ಪ್ರಕರಣದ ಬಗ್ಗೆ ಬಂದ ದೂರನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಇನ್ನೆರಡು ಹಂತಗಳಲ್ಲೂ ತೃಪ್ತಿಕರ ಅಂಕ ಬಾರದಿದ್ದರೆ ಮೂರನೇ ಹಂತದ ಪರೀಕ್ಷೆಯನ್ನು ಬರೆಯಲು ಅವಕಾಶವಿದೆ ಎಂದು ತಾರಕೇಶರಿ ತಿಳಿಸಿದ್ದಾರೆ.

Related posts

ಶಿಶಿಲ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಉಜಿರೆ: ವಿಲ್ಸನ್ ಸಂತೋಷ್ ರೊಡ್ರಿಗಸ್ ಹೃದಯಾಘಾತದಿಂದ ನಿಧನ

Suddi Udaya

ಉಜಿರೆ ಟೆಕ್ಸ್ ಟೈಲ್ಸ್ ಉದ್ಯಮಿಯಿಂದ ಲೈಂಗಿಕ ದೌರ್ಜನ್ಯ ಆರೋಪ: ಕೆಲಸಕ್ಕೆ ಬಂದ ಮಹಿಳೆಯಿಂದ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು

Suddi Udaya

ಭಾರೀ ಗಾಳಿ-ಮಳೆ: ನಾವೂರು ನಾಗಜೆ ಯಮನಾ ರವರ ಮನೆಗೆ ಬಿದ್ದ ಬೃಹತ್ ಗಾತ್ರದ ಮರ: ಅಪಾರ ಹಾನಿ

Suddi Udaya

ಉಜಿರೆ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರಿಗೆ ‘ಕಲಿಕೆಯಲ್ಲಿ ಕಲೆ’ ಕಾರ್ಯಾಗಾರ

Suddi Udaya

ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ ) ತೋಟತ್ತಾಡಿ,ಚಿಬಿದ್ರೆ ಇದರ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂದಾಜು 80 ಲಕ್ಷದ ಸಮುದಾಯ ಭವನಕ್ಕೆ ಕರ್ನಾಟಕ ಸರ್ಕಾರದಿಂದ ಗರಿಷ್ಠ ಅನುದಾನ ನೀಡುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮೂಲಕ ಮನವಿ

Suddi Udaya
error: Content is protected !!