38.9 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಮೈರಾ ಬಾನು ರವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಘನತೆಗೆ ದಕ್ಕೆ ತರುವಂತೆ ಚಿತ್ರಿಸಿ ಹರಿಯ ಬಿಟ್ಟವರ ಮೇಲೆ ಪೋಲಿಸ್ ದೂರು

ಬೆಳ್ತಂಗಡಿ: ಇತ್ತೀಚೆಗೆ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ನ ಪ್ರದಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಪಕ್ಷದ ಸಕ್ರಿಯ ಕಾರ್ಯಕರ್ತೆ ನಡ ಗ್ರಾಮದ ಮಂಚದಪಲ್ಕೆ ನಿವಾಸಿ ಬಶೀರ್ ಅಹಮದ್ ರವರ ಪತ್ನಿ ಶ್ರೀಮತಿ ಉಮೈರಾ ಬಾನು ರವರ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿದ್ದ ಕೆಲವು ಪೋಟೋಗಳನ್ನು ತೆಗೆದು ದುರುಪಯೋಗ ಪಡಿಸಿ ಎಡಿಟ್ ಮಾಡಿ ಅಶ್ಲೀಲವಾಗಿ ಚಿತ್ರಿಸಿ ಬರೆದು ಸಾಮಾಜಿಕ ಜಾಲ ತಾಣದಲ್ಲಿ ಹರಿಯ ಬಿಟ್ಟ ಬಗ್ಗೆ ಎ. 02 ರಂದು ಬೆಳ್ತಂಗಡಿ ಪೋಲಿಸ್ ಠಾಣೆ ಗೆ ಲಿಖಿತ ದೂರನ್ನು ನೀಡಿ ನನ್ನನ್ನು ತೇಜೋವಧೆ ಮಾಡುವ ಉದ್ದೇಶದಿಂದ ಸಮಾಜಕ್ಕೆ ಅಪನಂಬಿಕೆ ಬರುವಂತೆ ಮತ್ತು ನನ್ನ ಘನತೆಗೆ ದಕ್ಕೆ ತರುವಂತೆ ಚಿತ್ರಿಸಿ ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟ ವ್ಯಕ್ತಿ ಮತ್ತು ವಿವಿಧ ಗ್ರೂಪ್ ಎಡ್ಮಿನ್ ಗಳ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಲಿಖಿತ ದೂರನ್ನು ಕಾಂಗ್ರೆಸ್ ನ ನಿಯೋಗ ಬೆಳ್ತಂಗಡಿ ಪೋಲಿಸ್ ಠಾಣಾ ನಿರೀಕ್ಷಕರಿಗೆ ನೀಡಿತು. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು

ನಿಯೋಗದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಮಹಿಳಾ ನಗರ ಘಟಕದ ಅಧ್ಯಕ್ಷರಾದ ಶ್ರೀಮತಿ ವಂದನಾ ಭಂಡಾರಿ ಅಂಡಿಂಜೆ, ಕಳಿಯ ಗ್ರಾಮ ಪಂಚಾಯತ್ ಸದಸ್ಯೆ , ಬೆಳ್ತಂಗಡಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾಗಿರುವ ಶ್ರೀಮತಿ ಮರೀಟಾ ಪಿಂಟೋ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಸೇವಾದಳದ ಮಾಜಿ ಅಧ್ಯಕ್ಷರಾದ ಸಮದ್ ಕುಂಡಡ್ಕ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ನಗರ ಘಟಕದ ಅಧ್ಯಕ್ಷರೂ. ಸರಕಾರದ ನಾಮನಿರ್ದೇಶಿತ ಆರೋಗ್ಯ ರಕ್ಷಾ ಸಮಿತಿ ಜಿಲ್ಲಾಸ್ಪತ್ರೆಯ ಸದಸ್ಯರು ಆಗಿರುವ ಅಬ್ದುಲ್ ಕರೀಮ್ ಗೇರುಕಟ್ಟೆ, ಬೆಳ್ತಂಗಡಿ ತಾಲೂಕು ಸಮುದಾಯ ಆಸ್ಪತೆಯ ರಕ್ಷಾ ಸಮಿತಿಯ ಸದಸ್ಯೆ ಶ್ರೀಮತಿ ಸವಿತ,ಮಾಜಿ ಪಂಚಾಯತ್ ಸದಸ್ಯರಾದ ಶ್ರೀನಿವಾಸ ಉಜಿರೆ, ಯುವ ಕಾಂಗ್ರೆಸ್ ನ ಸಿದ್ದೀಕ್ ಮಲೆ ಬೆಟ್ಟು,ಕಲಂದರ್ ಕೊಕ್ಕಡ, ಸದಾನಂದ ನಾಲ್ಕೂರು ಹಾಜರಿದ್ದರು.

Related posts

ಡಾ. ವಿಕ್ರಮ್ ತಿಮರಡ್ಕ ರವರಿಗೆ ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ. ಪದವಿ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ನಲ್ಲಿ ಮಕ್ಕಳ ಹಕ್ಕುಗಳ ಸಪ್ತಾಹ

Suddi Udaya

ಇಳಂತಿಲ: ಡೇನಿತ್ ಸಾಲ್ಯಾನ್ ತೋಟದಲ್ಲಿ ಕಾಳಿಂಗ ಸರ್ಪ ಪತ್ತೆ

Suddi Udaya

ಬೆಳ್ತಂಗಡಿ ಶ್ರೀ ಧ. ಮಂ.ಆಂ.ಮಾ. ಶಾಲೆಯಲ್ಲಿ ಆಟಿದ ಕೂಟ

Suddi Udaya

ಹೊಸಂಗಡಿ ವಲಯದ ಭಜನಾ ಪರಿಷತ್ ಸಭೆ

Suddi Udaya

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ- ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದಲ್ಲಿ ‘ತ್ರಿಪದಿ ಬ್ರಹ್ಮ, ಸಂತ ಕವಿ ಸವ೯ಜ್ಞ’ ಜಯಂತಿ ಆಚರಣೆ

Suddi Udaya
error: Content is protected !!