ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ತೆಕ್ಕಾರು: ಭಟ್ರಬೈಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ದೇವರ ಮೂರ್ತಿಯ ಪುರಪ್ರವೇಶದ ಅದ್ದೂರಿ ಮೆರವಣಿಗೆ

ಬೆಳ್ತಂಗಡಿ: ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ದೇವರ ಮೂರ್ತಿಯ ಪುರಪ್ರವೇಶದ ಮೆರವಣಿಗೆಗೆ ಎ.5 ರಂದು ಬ್ರಹ್ಮಕಲಸ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಗುರುವಾಯನಕೆರೆ ಬರೋಡ ನಿವಾಸದಲ್ಲಿ ಕಾಶಿ ಶೆಟ್ಟಿ ನವಶಕ್ತಿ ರವರು ಚಾಲನೆ ನೀಡಿದರು.

ಎ.4 ರಂದು ಶುಕ್ರವಾರ ಕಾರ್ಕಳದಿಂದ ಶ್ರೀ ಗೋಪಾಲಕೃಷ್ಣ ದೇವರ ಮೂರ್ತಿಯು ಬ್ರಹ್ಮಕಲಸದ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡರ ನಿವಾಸಕ್ಕೆ ಬಂದು ಅದೇ ದಿನ ರಾತ್ರಿ ಗಂಟೆ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮವು ಜರಗಿತು.

ಸಮೀಪಿಸುತ್ತಿರುವ ಬ್ರಹ್ಮಕಲಶೋತ್ಸವದ ದಿನ:
ತೆಕ್ಕಾರು ಗ್ರಾಮದ ಭಟ್ರಬೈಲು ದೇವರಗುಡ್ಡೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ. ಕಳೆದ ವರ್ಷದಲ್ಲಿ ಶಿಲಾನ್ಯಾಸ ನೆರವೇರಿ ಇದೀಗ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಬ್ರಹ್ಮಕಲಶೋತ್ಸವದ ಗತವೈಭವಕ್ಕೆ ಅಣಿಯಾಗಲಿದೆ.

ಅದ್ದೂರಿ ಮೆರವಣಿಗೆ :
ದೇವರ ಮೂರ್ತಿಯನ್ನು ಅದ್ಧೂರಿ ಮೆರವಣಿಗೆಯ ಮುಖಾಂತರ ಗುರುವಾಯನಕೆರೆ, ಗೇರುಕಟ್ಟೆ, ಕುಪ್ಪೆಟ್ಟಿ, ಕರಾಯ, ಉಪ್ಪಿನಂಗಡಿ, ಮಾರ್ಗವಾಗಿ ಬಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಗೈದು , ಪೆದಮಲೆ, ಪಿಲಿಗೂಡು, ಸರಳಿಕಟ್ಟೆ, ಹೊಸಮೊಗ್ರು, ಬಾಜಾರ, ನೆಲ್ಲಿಪಲ್ಕೆಯಾಗಿ ಭಟ್ರಬೈಲು ದೇವರಗುಡ್ಡೆ ಕ್ಷೇತ್ರಕ್ಕೆ ಸಾಗಲಿದೆ. ಊರ ಮಧ್ಯೆ ಭಕ್ತರು ದೇವರ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಚೆಂಡೆ ವಾದ್ಯ, ಉದ್ಘೋಷದ ಮೂಲಕ ಮೆರವಣಿಗೆ ನಡೆಯಿತು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಬ್ರಹ್ಮಕಲಶೋತ್ಸವದ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ನವಶಕ್ತಿ, ಟ್ರಸ್ಟ್ ಅಧ್ಯಕ್ಷ ನಾಗಭೂಷಣ್ ರಾವ್, ತುಕಾರಾಂ ನಾಯಕ, ಬ್ರಹ್ಮಕಲಶೋತ್ಸವದ ಸಮಿತಿ ಗೌರವಾಧ್ಯಕ್ಷರಾದ ಗಣೇಶ್ ರಾವ್ ಕರವಾಳಿ ಕಾಲೇಜು, ಕರುಣಾಕರ ಸುವರ್ಣ , ಯೋಗೀಂದ್ರ ಭಟ್ ಉಳಿ, ಕಾರ್ಯಾಧ್ಯಕ್ಷ ಲಕ್ಷಣ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ರೈ, ಕೋಶಾಧಿಕಾರಿ ಅಣ್ಣು ಪೂಜಾರಿ ,

ಪ್ರಮುಖರಾದ ಮಂಜುನಾಥ್ ಸಾಲ್ಯಾನ್, ರಾಜೇಶ್ ಶೆಟ್ಟಿ ನವಶಕ್ತಿ, ರಕ್ಷಿತ್ ಶೆಟ್ಟಿ ಪಣೆಕ್ಕರ, ರಾಜು ಪ್ರಕಾಶ್ ಶೆಟ್ಟಿ ಮದ್ದಡ್ಕ ಸಹಿತ ಮತ್ತಿತರರು ಹಾಗೂ ವಿವಿಧ ಉಪ ಸಮಿತಿಗಳ ಸಂಚಾಲಕರು ಉಪಸ್ಥಿತರಿದ್ದರು.

Related posts

ಮಡಂತ್ಯಾರು ಶ್ರೀ ಮಾರಿಕಾಂಬಾದೇವಿ ದೇವಸ್ಥಾನದ ಜೀರ್ಣೋದ್ವಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧನಸಹಾಯ

Suddi Udaya

ಪಟ್ಟೂರಿನಲ್ಲಿ ಪೊಲೀಸರು ಜಪ್ತಿ ಮಾಡಿದ ಮನೆಗೆ ತಾಲೂಕು ಮುಸ್ಲಿಂ ಮುಖಂಡರ ಭೇಟಿ: ಸಂತ್ರಸ್ತೆ ಝೊಹರಾ ಕುಟುಂಬಸ್ಥರ ಜೊತೆ ಮಾತುಕತೆ

Suddi Udaya

ನೀಟ್-2026ರಲ್ಲಿ ಎಕ್ಸಲೆಂಟ್ ಮೂಡುಬಿದಿರೆ ಪಿಯು ಕಾಲೇಜಿನ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ

Suddi Udaya

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ; ರಾಷ್ಟ್ರೀಯ ತನಿಖಾ ತಂಡದಿಂದ ತನಿಖೆಯಾಗಬೇಕು : ಶಾಸಕ ಹರೀಶ್ ಪೂಂಜ ಆಗ್ರಹ

Suddi Udaya

ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವದ ಪೂರ್ವಭಾವಿ ಸಭೆ

Suddi Udaya

ಅಂತ ರಾಜ್ಯಗಣಿತ ಜ್ಞಾನತರಬೇತಿ ಕಾರ್ಯಕ್ರಮ

Suddi Udaya
error: Content is protected !!