April 10, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ಪ್ರೇರಣಾ ಶಿಬಿರದ ಉದ್ಘಾಟನೆ

ಸುಲ್ಕೇರಿ : ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ , ಸುಲ್ಕೇರಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ , ಸುಲ್ಕೇರಿ ಶ್ರೀರಾಮ ಪ್ರೌಢ ಶಾಲೆ ಸುಲ್ಕೇರಿ ಮಾತೃ ಸಂಸ್ಥೆ: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, 2024 -2025 ನೇ ಶೈಕ್ಷಣಿಕ ವರ್ಷದ ” ಪ್ರೇರಣಾ ಶಿಬಿರ ಎ.03 ರಿಂದ ಎ. 07 ರ ತನಕ ನಡೆಯಲಿದ್ದು ಇದರ ಉದ್ಘಾಟನಾ ಕಾರ್ಯಕ್ರಮವು ಎ. 03 ರಂದು ಶ್ರೀರಾಮ ಶಾಲೆ ಸುಲ್ಕೇರಿಯ ಶ್ರೀರಾಮ ಪ್ರಾರ್ಥನಾ ಮಂದಿರದಲ್ಲಿ ನಡೆಯಿತು.

ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಚಿಂತನೆಯನ್ನು ಬೆಳೆಸಲು , ವ್ಯಕ್ತಿತ್ವ ವಿಕಸನಕ್ಕಾಗಿ, ಭಾರತೀಯ ಸಂಸ್ಕೃತಿಯ ಅರಿವು ಮೂಡಿಸುವ ದೃಷ್ಟಿಯಿಂದ ವಿವಿಧ ವಿಷಯಗಳು ಹಾಗೂ ಚಟುವಟಿಕೆಗಳ ಮೂಲಕ ಪ್ರೇರಣೆ ಸಿಗುವಂತಾಗಲು ಆಯೋಜಿಸಿಕೊಂಡ ಈ ಶಿಬಿರವನ್ನು ಶಾಲಾ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಗಣೇಶ್ ಹೆಗ್ಡೆ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಾಜು ಪೂಜಾರಿ ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಶ್ರೀ ರಾಮ ಪ್ರೌಢ ಶಾಲೆ , ಪಟ್ಟೂರು ಇಲ್ಲಿನ ಮುಖ್ಯ ಗುರುಗಳಾದ ಚಂದ್ರಶೇಖರ ಶೇಠ್ , ಶ್ರೀ ರಾಮ ಪ್ರೌಢಶಾಲೆ ಸುಲ್ಕೇರಿಯ ಮುಖ್ಯಗುರುಗಳಾದ ಪ್ರಮೋದ್ ಕುಮಾರ್ , ಶಿಬಿರ ಸಂಯೋಜಕರಾದ ಸತೀಶ್ ಕುಮಾರ್ ಎನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 9 ನೇ ತರಗತಿ ಕು| ಆದ್ಯಾ ಸ್ವಾಗತಿಸಿ , 7ನೇ ತರಗತಿಯ ಕು| ಮನ್ವಿತಾ ಧನ್ಯವಾದವಿತ್ತರು. 9ನೇತರಗತಿಯ ಕು| ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ಲಯನ್ಸ್ ಕ್ಲಬ್ ಬೆಳ್ತಂಗಡಿಯ ವತಿಯಿಂದ ದೀಪಾವಳಿ ಸಂಭ್ರಮ

Suddi Udaya

ಶಿಶಿಲ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ರೇಖ್ಯ: ಪೊರ್ಕಳ ಅರಣ್ಯ ಪ್ರದೇಶದಲ್ಲಿ ಬಾರಿ ಬೆಂಕಿ

Suddi Udaya

ಸುದ್ದಿ ಉದಯ ವರದಿಯ ಫಲಸ್ರುತಿ: 13 ಕೋಟಿ ವೆಚ್ಚದ ಸಮಗ್ರ ಕುಡಿಯುವ ನೀರಿನ ಯೋಜನೆ : ರಕ್ಷೀತ್ ಶಿವರಾಂ ಹಾಗೂ ಅಧಿಕಾರಿಗಳ ತಂಡ ಭೇಟಿ ಪರಿಶೀಲನೆ:ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರಕ್ಷಿತ್ ಶಿವರಾಂ

Suddi Udaya

ಬೆಳ್ತಂಗಡಿ ವಕೀಲರ ಸಂಘದ ವಾರ್ಷಿಕ ಮಹಾಸಭೆ

Suddi Udaya

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಕನ್ಯಾನ ಸದಾಶಿವ ಶೆಟ್ಟಿ ಆಯ್ಕೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ