ಮೇಲಂತಬೆಟ್ಟು: ಕೊಡಮಣಿತ್ತಾಯ ದೈವಸ್ಥಾನ-ಶ್ರೀ ವನದುರ್ಗೆ ದೇವಸ್ಥಾನದಲ್ಲಿ ನಲ್ಕೆತ್ಯಾರು ಬ್ರಹ್ಮಬೈದರ್ಕಳ ಊರ ಗರಡಿ ಸ್ಥಳದಲ್ಲಿ ಜರುಗಿದ ಸಂಕ್ರಾಂತಿ ದರ್ಶನ-ಗರಡಿ ಶಿಲಾನ್ಯಾಸ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಕೆ. ಗಂಗಾಧರ ಗೌಡ, ಮಾಜಿ ಶಾಸಕ ಪ್ರಭಾಕರ ಬಂಗೇರ, ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಾಲನ ಟ್ರಸ್ಟ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ಆರ್. ಟಿ.ಒ ಹಿರಿಯ ವಾಹನ ನಿರೀಕ್ಷಕ ಕೆ. ಚರಣ್ ಕುಮಾರ್, ಬಿನುತಾ ವಸಂತ ಬಂಗೇರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಶೈಲೇಶ್ ಕುಮಾರ್, ಮಾರಿ ಪೂಜಾ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಮಾಪಲಾಡಿ ಅತಿಥಿ ಗಳನ್ನು ಸ್ವಾಗತಿಸಿದರು.