24.4 C
ಪುತ್ತೂರು, ಬೆಳ್ತಂಗಡಿ
May 25, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎ.9: ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ಜನಕ್ರೋಶ ಯಾತ್ರೆ

ಬೆಳ್ತಂಗಡಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ಜನಕ್ರೋಶ ಯಾತ್ರೆ ಮಂಗಳೂರಿನಲ್ಲಿ ಏಪ್ರಿಲ್ 9ರಂದು ಮಧ್ಯಾಹ್ನ 3ಗಂಟೆಗೆ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ತಿಳಿಸಿದರು.

ಅವರು ಎ.7 ರಂದು ಬೆಳ್ತಂಗಡಿ ಪ್ರವಾಸ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ ಕಾಂಗ್ರೆಸ್ ಸರಕಾರದ ದುರಾಡಳಿತದ ಕಾರಣಕ್ಕೆ ಆಗಿರುವ ಮಿತಿಮೀರಿದ ಬೆಲೆ ಏರಿಕೆ ಮತ್ತು ಭ್ರಷ್ಟಾಚಾರ, ಹದಗೆಟ್ಟ ಕಾನೂನು ವ್ಯವಸ್ಥೆ, ಸ್ವಜನಪಕ್ಷಪಾತ, ತುಷ್ಟೀಕರಣ ನೀತಿಯನ್ನು ಪ್ರತಿಭಟಿಸುವ ಈ ಯಾತ್ರೆಯಲ್ಲಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.

ಕರ್ನಾಟಕದ ಇತಿಹಾಸದಲ್ಲಿ ಹಿಂದೆಂದೂ ಕಂಡರಿದ ಮಟ್ಟಕ್ಕೆ ಬಡವರ ಬದುಕಿಗೆ ಬೆಂಕಿ ಇಡುವ ಬೆಲೆ ಏರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ. ಹಾಲಿನ ದರ, ಮದ್ಯದ ದರ, ಮೆಟ್ರೋ ದರ, ಕಾಲೇಜು ಪ್ರವೇಶ ಶುಲ್ಕ, ಬಿತ್ತನೆ ಬೀಜ ದರ, ಪೆಟ್ರೋಲ್‌-ಡೀಸೆಲ್‌ ದರ, ಬಸ್ ದರ, ಸ್ಟ್ಯಾಂಪ್ ದರ ಏರಿಕೆಯಾಗಿದೆ. ಈಗ ಕಸದಿಂದಲೂ ದುಡ್ಡು ಹೊಡೆಯಲಾಗುತ್ತಿದೆ. ಬೆಂಗಳೂರಿನ ಜನರು ಕಸಕ್ಕೂ ಶುಲ್ಕ ನೀಡಬೇಕಾಗಿದೆ. ಇದರಿಂದಲೇ ಒಂದೂವರೆ ಕೋಟಿ ರೂ. ಲೂಟಿ ಮಾಡಲಾಗುತ್ತಿದೆ. ಬೆಳಿಗ್ಗೆ ಎದ್ದು ಸರಕಾರ ಇವತ್ತು ಯಾವುದರ ದರ ಏರಿಸುತ್ತಾರೋ ಎಂಬ ಆತಂಕದ ಸ್ಥಿತಿಯಲ್ಲಿ ಜನ ಬದುಕುವಂತಾಗಿದೆ.

ಕಾಂಗ್ರೆಸ್‌ ಜಾತ್ಯತೀತವಾದಿ ಎಂದು ಹೇಳಿಕೊಂಡು ಮುಸ್ಲಿಮರ ತುಷ್ಟೀಕರಣ ಮಾಡುತ್ತಿದೆ. ಸರ್ಕಾರಿ ಗುತ್ತಿಗೆಯಲ್ಲಿ ಧರ್ಮಾಧಾರಿತವಾದ ಮೀಸಲು ಸಂವಿಧಾನದ ನೀತಿಯ ವಿರುದ್ಧ ಕೊಡುವ ಅಗತ್ಯವಿರಲಿಲ್ಲ. ಈಗಾಗಲೇ ಹೆಚ್ಚಿನ ಗುತ್ತಿಗೆಯನ್ನು ಮುಸ್ಲಿಮರೇ ಮಾಡುತ್ತಿದ್ದಾರೆ. ಇದರ ವಿರುದ್ಧ ಹೋರಾಟ ಮಾಡಲಾಗುತ್ತದೆ. ಬಿಜೆಪಿ ಕಾರ್ಯಕರ್ತರ ವಿರುದ್ಧವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಡೆತ್‌ನೋಟ್‌ ಗಿಂತ ಹೆಚ್ಚಿನ ಸಾಕ್ಷಿ ಬೇಡವೆಂದು ಇವರೇ ಹೇಳುತ್ತಿದ್ದರು. ವಿನಯ್‌ ಅವರ ಡೆತ್‌ನೋಟ್‌ ಪರಿಗಣಿಸುತ್ತಲೇ ಇಲ್ಲ. ಈ ಹಿಂದೆ ಬಿಜೆಪಿ ಅವಧಿಯಲ್ಲಿ ಈಶ್ವರಪ್ಪನವರ ವಿಚಾರದಲ್ಲಿ ಇವರೇ ಹೋರಾಟ ಮಾಡಿದ್ದರು. ಈಗ ಉಲ್ಟಾ ಮಾತಾಡುತ್ತಿದ್ದಾರೆ. ವಾಟ್ಸ್ ಅಪ್ ಗ್ರೂಪ್ ನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಥವಾ ಶಾಸಕರ ವಿರುದ್ಧ ಸಂದೇಶ ಹಾಕಿದರೆ ಅವರ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗುತ್ತಿದೆ. ಇದು ದೊಡ್ಡ ದಂಧೆಯಾಗಿ ಬೆಳೆದಿದೆ. ಸರ್ಕಾರದ ವಿರುದ್ಧ ಪ್ರತಿಭಟಿಸಿದರೆ ಆಗಲೂ ದೂರು ದಾಖಲಿಸುತ್ತಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ರಾಜೇಶ್ ಪ್ರಭು, ಕಾರ್ಯದರ್ಶಿ ಶರತ್ ಉಪಸ್ಥಿತರಿದ್ದರು.

ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಸ್ವಾಗತಿಸಿ, ಧನ್ಯವಾದವಿತ್ತರು.

Related posts

ಬೆಳ್ತಂಗಡಿ ತಾಲೂಕು ಔಷಧಿ ‌ವ್ಯಾಪಾರಸ್ಥರ ಸಂಘ: ಜಾಗತಿಕ ಔಷಧಿ ತಜ್ಞರ ದಿನದ ಆಚರಣೆ

Suddi Udaya

ಚಾರ್ಮಾಡಿ: ಅನ್ನಾರು ಕಾಡಿನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿದ್ದ ಕಾಡಾನೆ ಸಾವು

Suddi Udaya

ಎಸ್.ಡಿ.ಯಂ. ಐ.ಟಿ.ಐ.ಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಶಾಖೆಯ ಮಾಸಿಕ ಸಭೆ

Suddi Udaya

ಎಕ್ಸೆಲ್ ನ ವಿದ್ಯಾರ್ಥಿ ಸಂಜನಾ ಜೆ ಇ ಇ ಅಡ್ವಾನ್ಸ್ ನಲ್ಲಿ ರಾಷ್ಟ್ರಕ್ಕೆ 731 ರಾಂಕ್

Suddi Udaya

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ಸೇಕ್ರೆಡ್ ಹಾರ್ಟ್ ವಾಳೆಯಲ್ಲಿ ಮನೆ ಹಸ್ತಾಂತರ

Suddi Udaya
error: Content is protected !!