ಉಜಿರೆ: ಕಳೆದ ಕೆಲ ಸಮಯಗಳಿಂದ ಉಜಿರೆಯಲ್ಲಿ ನಡೆಸುತ್ತಿರುವ ಸ್ನೇಹ ಕಿರಣ್ ಬೇಬಿ ಸಿಟ್ಟಿಂಗ್ ಗೆ ಇಂದು ಸುರಿದ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ಬಿದ್ದು ದೇವರ ದಯೆದಿಂದ ಒಳಗಿದ್ದ ಮಕ್ಕಳು ಯಾವುದೇ ತೊಂದರೆಯಿಲ್ಲದೆ ಪಾರಾಗಿದ್ದಾರೆ.

ಸಂಜೆ ಸುರಿದ ಗಾಳಿ ಮಳೆಗೆ ಬೇಬಿ ಸಿಟ್ಟಿಂಗ್ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಹಂಚು ಪುಡಿಯಾಗಿದೆ. ಮಕ್ಕಳು ಒಳಗೆಯಿದ್ದು ಸಂಜೆಯ ತಿಂಡಿಗೆ ಹೊರಗಡೆ ಬಂದಿದ್ದರು ಎನ್ನಲಾಗಿದೆ. ಮರ ಬಿದ್ದ ತಕ್ಷಣ ಅಕ್ಕಪಕ್ಕದವರು ಸೇರಿ ತೆರವು ಕಾರ್ಯಗಳನ್ನು ಮಾಡಿದ್ದಾರೆ. ಮಕ್ಕಳನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.