ಕುವೆಟ್ಟು: ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಶಾಲಾ ಎಸ್ ಡಿ. ಎಂ .ಸಿ ಅಧ್ಯಕ್ಷ ಸಿರಾಜ್ ಎಂ ಚಿಲಿಂಬಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಖ್ಯ ಶಿಕ್ಷಕ ಭಾಸ್ಕರ್ ಮಾತನಾಡಿ ವಿದ್ಯಾರ್ಥಿಗಳ ಮುಂದಿನ ಪ್ರೌಢ ಶಿಕ್ಷಣದ ಬಗ್ಗೆ ಹಿತವಚನ ನೀಡಿದರು. ಸಿರಾಜ್ ಎಂ ಚಿಲಿಂಬಿ ಶುಭ ಹಾರೈಸಿದರು. ಶಿಕ್ಷಕ ವೃಂದದವರು ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ಎಸ್ ಡಿ ಎಮ್ ಸಿ ಸದಸ್ಯರು, ಅಡುಗೆ ಸಿಬ್ಬಂದಿಯವರು ಭಾಗವಹಿಸಿದ್ದರು. ವಿದ್ಯಾರ್ಥಿಗಳು ಶಾಲೆಗೆ ಕುಕ್ಕರನ್ನು ಕೊಡುಗೆಯಾಗಿ ನೀಡಿದರು. ವಿದ್ಯಾರ್ಥಿನಿ ಭುವಿ ನಿರೂಪಿಸಿ ಕಾರ್ತಿಕ್ ಸ್ವಾಗತಿಸಿ, ಆಲ್ವಿನ್ ಡಿಕೋಸ್ತ ವಂದಿಸಿದರು.